ಬೀದರ್(ಸೆ.16): ಚಲಿಸುತ್ತಿದ್ದ ಬಸ್​​​​ಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮೂರು ವರ್ಷದ ಬಾಲಕನೊಬ್ಬ ಸಜೀವ ದಹನವಾದ ಧಾರುಣ ಘಟನೆ ಬೀದರ್ ಜಿಲ್ಲೆ ಹುಮನಾಬಾದ್​​ ಪಟ್ಟಣದಲ್ಲಿ ನಡೆದಿದೆ.

ಶಿರಡಿಯಿಂದ ಹೈದ್ರಾಬಾದ್'​​​ಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಕಾವೇರಿ ಬಸ್​​ನಲ್ಲಿ ಈ ಘಟನೆ ನಡೆದಿದೆ. ಹೈದ್ರಾಬಾದ ಮೂಲದ, 3 ವರ್ಷದ ವಿಹಾನ್​​ ಎಂಬ ಬಾಲಕ ಸಜೀವ ದಹನಗೊಂಡಿದ್ದು, ಘಟನೆಯಲ್ಲಿ ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಮ್ನಾಬಾದ್​​​ ಪಟ್ಟಣದ ಹೊರವಲಯದ ಠಾಕೂರ್ ಡಾಬಾ ಸಮಿಪ ಈ ಘಟನೆ ನಡೆದಿದೆ. ಬಸ್​​ ಸುಟ್ಟು ಕರಕಲಾಗಿದ್ದು, ಭಾರಿ ದುರಂತ ತಪ್ಪಿದೆಯಾದರೂ, ಘಟನೆಯಲ್ಲಿ ಬಾಲಕನ ಸಾವು ಪೋಷಕರನ್ನು ಕಂಗಾಲಾಗಿಸಿದೆ.