ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಬೆಂಗಳೂರು(ನ.13): ಕೋಣನಕುಂಟೆ ಕ್ರಾಸ್​ ಬಳಿಯ 4 ಅಂತಸ್ತಿನ ಲೊವೆಬಲ್​ ಲಾಂಜರಿ ಗಾರ್ಮೆಂಟ್ಸ್​ ಕಟ್ಟಡಕ್ಕೆ ನೆನ್ನೆ ರಾತ್ರಿ ಬೆಂಕಿ ಬಿದ್ದಿದೆ. ಕಟ್ಟಡವು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದು ಬೆಂಕಿ ನಂದಿಸಲು 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹರಸಾಹಸ ಪಡುತ್ತಿವೆ. ಶಾರ್ಟ್​ ಸಕ್ಯೂರ್ಟ್​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 25 ವರ್ಷದಿಂದ ಗಾರ್ಮೆಂಟ್ಸ್ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.