ಇದೇ ತೋಟದ ಮನೆಯಲ್ಲಿ ಲೀಲಾವತಿ ಹಾಗೂ ಅವರ ಪುತ್ರ ನಟ ವಿನೋದ್ ರಾಜ್ ವಾಸವಾಗಿದ್ದಾರೆ.

ಬೆಂಗಳೂರು(ಫೆ.14): ನೆಲಮಂಗಲ ತಾಲ್ಲೂಕು ಮೈಲಹಳ್ಳಿ ಸಮೀಪದಲ್ಲಿರುವ  ಕನ್ನಡದ ಹಿರಿಯ ನಟಿ ಲೀಲಾವತಿ ಅವರ  ತೋಟದಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಬೆಂಕಿ ಕಾಣಿಸಿಕೊಂಡು ಗಾಳಿ ಹೆಚ್ಚಾಗಿ ವ್ಯಾಪಿಸಿದ ಕಾರಣ 20 ಕ್ಕೂ ಅಧಿಕ ತೆಂಗಿನ ಮರ, ಮಾವು, ಸಪೋಟ ಮೊದಲಾದವು ಸುಟ್ಟು ಹೋಗಿವೆ. ತಕ್ಷಣಕ್ಕೆ ಸುತ್ತಲಿನವರು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆಯೂ ಲೀಲಾವತಿ ಅವರ ತೋಟದಲ್ಲಿ ಬೆಂಕಿ ತಗುಲಿ ಭಾರೀ ನಷ್ಟವಾಗಿತ್ತು. ಇದೇ ತೋಟದ ಮನೆಯಲ್ಲಿ ಲೀಲಾವತಿ ಹಾಗೂ ಅವರ ಪುತ್ರ ನಟ ವಿನೋದ್ ರಾಜ್ ವಾಸವಾಗಿದ್ದಾರೆ.