ಕಳೆದ ತಡರಾತ್ರಿ ದುಷ್ಕರ್ಮಿಗಳು ಜೋಳದ ಬಣವೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇಲ್ಲಿನ ಗೋಶಾಲೆಗೂ ಹಾಗೂ ಕೆಲ ಸ್ಥಳೀಯ ಮುಖಂಡರಿಗೆ ಜಮೀನು ವಿವಾದವಿದ್ದು, ಇದರಿಂದ ದುಷ್ಕೃತ್ಯ ಎಸಗಿರಬಹುದು ಎನ್ನಲಾಗಿದೆ.
ದೊಡ್ಡಬಳ್ಳಾಪುರ(ನ.30) ಗೋಶಾಲೆಯ ಜೋಳದ ಬಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ 50ಕ್ಕೂ ಅಧಿಕ ಲೋಡ್ ಮೇವು ಬೆಂಕಿಗೆ ಆಹುತಿಯಾದ ಘಟನೆ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಸಮೀಪದ ಗೋಶಾಲೆಯಲ್ಲಿ ಘಟನೆ ನಡೆದಿದೆ. ಈ ಗೋಶಾಲೆಯಲ್ಲಿ ಸಾವಿರಾರು ಹಸುಗಳನ್ನು ಆರೈಕೆ ಮಾಡುತ್ತಿದ್ದು, ಇತ್ತೀಚೆಗೆ ಇಲ್ಲಿ 5 ಲಕ್ಷ ಮೌಲ್ಯದ ಜೋಳದ ಮೇವನ್ನು ತರಿಸಲಾಗಿತ್ತು.
ಆದರೆ ಕಳೆದ ತಡರಾತ್ರಿ ದುಷ್ಕರ್ಮಿಗಳು ಜೋಳದ ಬಣವೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇಲ್ಲಿನ ಗೋಶಾಲೆಗೂ ಹಾಗೂ ಕೆಲ ಸ್ಥಳೀಯ ಮುಖಂಡರಿಗೆ ಜಮೀನು ವಿವಾದವಿದ್ದು, ಇದರಿಂದ ದುಷ್ಕೃತ್ಯ ಎಸಗಿರಬಹುದು ಎನ್ನಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಬಸವರಾಜ್ ಡಿಕ್ರಾಸ್ ಎಂಬುವವರು ಗೋಶಾಲೆಯನ್ನ ನಡೆಸಲು ಬಿಡೋದಿಲ್ಲ ಎಂದು ಹೇಳಿದ್ದರು. ಹೀಗಾಗಿ ಜೋಳದ ಬಣವೆಗೆ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ ಎಂದು ಗೋಶಾಲ ನಿರ್ವಾಹಕ ಜೀವನ್ ಕುಮಾರ್ ಆರೋಪಿಸಿದ್ದಾರೆ. ಇನ್ನು ಈ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
