ಹಮದಾಬಾದ್[ಜೂ.16]: ನಕಲಿ ವಿಡಿಯೋವೊಂದನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿದ ಹಿನ್ನೆಲೆಯಲ್ಲಿ ಗುಜರಾತ್ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲಾಗಿದೆ

ಅರೆಬೆತ್ತಲೆ ಸ್ಥಿತಿ ಯಲ್ಲಿದ್ದ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಯಾರೋ ಒಬ್ಬ ವ್ಯಕ್ತಿ ಥಳಿಸುತ್ತಿರುವ ವಿಡಿಯೋವೊಂದನ್ನು ಮೇ 20ರಂದು ಮೇವಾನಿ ಟ್ವೀಟರ್‌ನಲ್ಲಿ ಶೇರ್ ಮಾಡಿದ್ದರು. ವಲ್ಸಾದ್ ಮೂಲದ ಆರ್‌ಎಂವಿಎಂ ಶಾಲೆಯ ಶಿಕ್ಷಕ ಈತ ಎಂದು ಬರೆದಿದ್ದರು.

ಆದರೆ ಆ ವಿಡಿಯೋ ತಮ್ಮ ಶಾಲೆಯದ್ದಲ್ಲ ಎಂದು ಶಾಲಾ ಪ್ರಾಂಶುಪಾಲರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇವಾನಿ ವಿರುದ್ಧ ಐಪಿಸಿ ಸೆಕ್ಷನ್ 505(2), 500 ಅಡಿ ಪ್ರಕರಣ ದಾಖಲಿಸಲಾಗಿದೆ