ಬೆಂಗಳೂರು :  ನಟ ರವಿಪ್ರಕಾಶ್‌ ಅವರು ನೀಡಿದ ದೂರಿನ ಮೇರೆಗೆ ನಟಿ ವಿಜಯಲಕ್ಷ್ಮೀ ಹಾಗೂ ಅವರ ಸಹೋದರಿ ವಿರುದ್ಧ ನಿಂದನೆ ಹಾಗೂ ಬೆದರಿಕೆ ಕಾಯ್ದೆಯಡಿ ಚನ್ನಮ್ಮಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಟಿ ವಿಜಯಲಕ್ಷ್ಮೀ ಅವರು ಅನಾರೋಗ್ಯಕ್ಕೀಡಾಗಿದ್ದು, ಆರ್ಥಿಕ ನೆರವು ನೀಡುವಂತೆ ಅವರ ಸಹೋದರಿ ಉಷಾ ಅವರು ಕೇಳಿಕೊಂಡಿದ್ದರು. ಮಾನವೀಯತೆ ದೃಷ್ಟಿಯಿಂದ ಫೆ.27ರಂದು ಮಲ್ಯ ಆಸ್ಪತ್ರೆಗೆ ತೆರಳಿ ಒಂದು ಲಕ್ಷ ಹಣವನ್ನು ಉಷಾದೇವಿ ಅವರಿಗೆ ನೀಡಿದ್ದೆ. ವಿಜಯಲಕ್ಷ್ಮೀ ಅವರು ಜಯದೇವ ಆಸ್ಪತ್ರೆಗೆ ದಾಖಲಾದಾಗ ಉಷಾದೇವಿ ಅವರ ಮನವಿ ಮೇರೆಗೆ ಮಾ.2ರಂದು ರವಿಪ್ರಕಾಶ್‌ ಹಾಗೂ ಸಂಬಂಧಿಕರು ಆಸ್ಪತ್ರೆಗೆ ಹೋಗಿದ್ದೆವು. ಈ ವೇಳೆ ವಿಜಯಲಕ್ಷ್ಮೀ ಅವರು ಹಣ ಕೊಟ್ಟು ಸಹಾಯ ಮಾಡಿದ್ದಕ್ಕೆ ನನಗೆ ಧನ್ಯವಾದ ಹೇಳಿದ್ದರು. 

ಅವರು ಆಸ್ಪತ್ರೆಯಲ್ಲಿದ್ದ ವೇಳೆ ಊಟ, ತಿಂಡಿ, ಬಟ್ಟೆಹಾಗೂ ಇತರೆ ಅಗತ್ಯ ವಸ್ತುಗಳನ್ನು ಪೂರೈಸಿದ್ದೆ. ಮಾ.5ರಂದು ಉಷಾದೇವಿ ಅವರು ಏಕಾಏಕಿ ಕರೆ ಮಾಡಿ, ನಿಮ್ಮ ಹಣವನ್ನು ನಿಮಗೆ ಬಿಸಾಕುತ್ತೇವೆ. ನೀವು ಯಾರು ನಮ್ಮ ಅಮ್ಮನ ಆರೋಗ್ಯ ವಿಚಾರಿಸಲು, ಪುರುಷರು ಹಣ ಕೊಟ್ಟು ಉಪಯೋಗ ಪಡೆಯುತ್ತಾರೆ ಎಂದು ಕೆಟ್ಟದಾಗಿ ನಿಂದಿಸಿದ್ದರು.

ಹಣ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ದುರುದ್ದೇಶದಿಂದ ತಿಲಕನಗರ ಠಾಣೆಯಲ್ಲಿ ತಮ್ಮ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಒಂದು ಲಕ್ಷ ವಾಪಸ್‌ ನೀಡದೆ, ಕೆಟ್ಟಶಬ್ದದಿಂದನನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿರುವ ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ರವಿಪ್ರಕಾಶ್‌ ದೂರಿನಲ್ಲಿ ಹೇಳಿದ್ದಾರೆ.