ಹುಬ್ಬಳ್ಳಿಯನ್ನು ಪಾಕ್’ಗೆ ಹೋಲಿಸಿದ ಜೋಶಿ : ಎಫ್ಐಆರ್ ದಾಖಲು

First Published 31, Mar 2018, 2:59 PM IST
FIR lodged against Karnataka BJP MP Pralhad Joshi
Highlights

ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.  ಹುಬ್ಬಳ್ಳಿಯ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹುಬ್ಬಳ್ಳಿ : ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.  ಹುಬ್ಬಳ್ಳಿಯ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೊಹಮ್ಮದ್ ಹನೀಫ್ ಎಂಬಾತ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಹುಬ್ಬಳ್ಳಿ ಜಿಲ್ಲಯ ಮಸೀದಿಗಳ ಒಳಗೆ ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದೆ ಎಂದು ಹೇಳಿದ್ದರು.

ಇಲ್ಲಿ ಹತ್ಯೆಯಾದ ವ್ಯಕ್ತಿಯ ಮನೆಗೆ ಭೇಟಿ ನೀಡಿದ್ದ ವೇಳೆ ಈ ರೀತಿಯಾಗಿ ಹೇಳಿದ್ದರು. ಅಲ್ಲದೇ ಇದೇ ವೇಳೆ ಹುಬ್ಬಳ್ಳಿಯನ್ನು ಪಾಕಿಸ್ಥಾನಕ್ಕೆ ಹೋಲಿಕೆ ಮಾಡಿದ್ದರಿಂದ ದೂರು ದಾಖಲು ಮಾಡಲಾಗಿತ್ತು.

 

loader