ಆ.15ರಂದು ನಂಜಾವಧೂತ ಶ್ರೀಗಳು ಮಠದ ಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನದ ಪೂಜಾರಿ ಕೃಷ್ಣಪ್ಪ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಸೇರಿದಂತೆ ಇತರೆ ಐವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ತುಮಕೂರು(ಡಿ.11): ಹಲ್ಲೆ ಆರೋಪದಡಿ ನಂಜಾವಧೂತ ಶ್ರೀಗಳ ವಿರುದ್ಧ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆ.15ರಂದು ನಂಜಾವಧೂತ ಶ್ರೀಗಳು ಮಠದ ಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನದ ಪೂಜಾರಿ ಕೃಷ್ಣಪ್ಪ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಸೇರಿದಂತೆ ಇತರೆ ಐವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಅರ್ಚಕ ಕೃಷ್ಣಪ್ಪ ಹಲ್ಲೆ ನಡೆಸಿದ ವಿಚಾರವಾಗಿ ಪಟ್ಟನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದರು ಆದರೆ ಪೊಲೀಸರು ಮಾತ್ರ ದೂರು ಸ್ವೀಕರಿಸಿರಲಿಲ್ಲ. ಹೀಗಾಗಿ ಅರ್ಚಕ ಕೃಷ್ಣಪ್ಪ ಶಿರಾ ಕೋರ್ಟ್ ಮೆಟ್ಟಿಲೇರಿದ್ದ ರು. ಇದೀಗ ಶಿರಾದ 1ನೇ ಜೆಎಂಎಫ್ಸಿ ಕೋರ್ಟ್ ಆದೇಶದ ಮೇರೆಗೆ ಶ್ರೀಗಳ ವಿರುದ್ಧ FIR ದಾಖಲಿಸಲಾಗಿದೆ.