ಜನಪ್ರತಿನಿಧಿಗಳಿಗೆ ನಾಲಿಗೆ ಮೇಲೆ ಹಿಡಿತವಿರಬೇಕು, ಬೇರೆಯವರಿಗೆ ಗೌರವ ಕೊಟ್ಟು ಮಾತನಾಡಬೇಕು. ಬೆಂಬಲಿಗರನ್ನು ಮೆಚ್ಚಿಸಲು ಮಾನಗೆಟ್ಟವರಂತೆ ಮಾತನಾಡಿ ಇದೀಗ ಮಾಗಡಿ ಶಾಸಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಠಾಣೆಗೆ ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿದ ಬಾಲಕೃಷ್ಣ ವಿರುದ್ಧ ಎಫ್'ಐಆರ್ ದಾಖಲಾಗಿದ್ದು, ಬಂಧನ ಭೀತಿ ಶುರುವಾಗಿದೆ.
ಬೆಂಗಳೂರು(ಜ.20): ಜನಪ್ರತಿನಿಧಿಗಳಿಗೆ ನಾಲಿಗೆ ಮೇಲೆ ಹಿಡಿತವಿರಬೇಕು, ಬೇರೆಯವರಿಗೆ ಗೌರವ ಕೊಟ್ಟು ಮಾತನಾಡಬೇಕು. ಬೆಂಬಲಿಗರನ್ನು ಮೆಚ್ಚಿಸಲು ಮಾನಗೆಟ್ಟವರಂತೆ ಮಾತನಾಡಿ ಇದೀಗ ಮಾಗಡಿ ಶಾಸಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಠಾಣೆಗೆ ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿದ ಬಾಲಕೃಷ್ಣ ವಿರುದ್ಧ ಎಫ್'ಐಆರ್ ದಾಖಲಾಗಿದ್ದು, ಬಂಧನ ಭೀತಿ ಶುರುವಾಗಿದೆ.
ಇದೇ 15ರಂದು ಕುದೂರು ಠಾಣೆಗೆ ಬಂದಿದ್ದ ಬಾಲಕೃಷ್ಣ ಹಲ್ಲೆ ನಡೆಸಿದವರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸುವ ಬರದಲ್ಲಿ ಎಸ್ಐ ಹರೀಶ್ ಮತ್ತು ಇನ್ಸಪೆಕ್ಟರ್ ನಂದೀಶ್ ಅವರಿಗೆ ಬಾಯಿಗೆ ಬಂದಂತೆ ನಿಂಧಿಸಿದ್ದರು. ಪೊಲೀಸರ ಮೇಲೆ ಗೂಂಡಾ ವರ್ತನೆ ಮಾಡಿದ ಶಾಸಕರ ವಿರುದ್ಧ ಎಸ್ಪಿ ರಮೇಶ್ ಬಾನೊತ್ಗೆ ದೂರು ನೀಡಿದ್ದಾರೆ. ಈ ಸಂಬಂಧ ಮಾಗಡಿ ಶಾಸಕ ಬಾಲಕೃಷ್ಣ ಸೇರಿದಂತೆ 17 ಮಂದಿಯ ಮೇಲೆ ಐಪಿಸಿ ಸೆಕ್ಷನ್ 341, 352, 353, 504, 506 ಜೊತೆಗೆ 141 ಐಪಿಸಿ ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.
ತಮ್ಮದೇ ಪಕ್ಷದ ಬಂಡಾಯ ಶಾಸಕನ ಈ ವರ್ತನೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಖಂಡಿಸಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿದ ಮಾಗಡಿ ಶಾಸಕ ಬಾಲಕೃಷ್ಣ ತಾವು ಕ್ಷಮೆ ಕೇಳುವಂತಃ ತಪ್ಪನ್ನೇನು ಮಾಡಿಲ್ಲ ಎಂದರು.
ಗೂಂಡಾಗಿರಿ ಮೆರೆದು ನಾಲ್ಕು ದಿನಗಳಾದ ಮೇಲೆ ಮಾಧ್ಯಮಗಳ ಸುದ್ದಿ ಪ್ರಸಾರವಾದ ಮೇಲೆ ಶಾಸಕರ ಮೇಲೆ ಎಫ್ಐಆರ್ ದಾಖಲಾಗಿದೆ. ಇಷ್ಟುದಿನ ಹಿಂದೇಟು ಹಾಕಿದ್ಯಾಕೆ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಇಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ.
