ತಮ್ಮ ಬಂಗಲೆಯ ಹಿಂದಿರುವ ಮ್ಯಾಂಗ್ರೋವ್ ಮರಗಳನ್ನು ನಾಶಪಡಿಸಿ ಅಕ್ರಮವಾಗಿ ಕಾಮಗಾರಿ ನಡೆಸುತ್ತಿರುವ ಹಾಸ್ಯನಟ ಕಪಿಲ್ ಶರ್ಮಾ ಮೇಲೆ ಎಫ್ ಐಆರ್ ದಾಖಲಾಗಿದೆ.

ನವದೆಹಲಿ (ಡಿ.14): ತಮ್ಮ ಬಂಗಲೆಯ ಹಿಂದಿರುವ ಮ್ಯಾಂಗ್ರೋವ್ ಮರಗಳನ್ನು ನಾಶಪಡಿಸಿ ಅಕ್ರಮವಾಗಿ ಕಾಮಗಾರಿ ನಡೆಸುತ್ತಿರುವ ಹಾಸ್ಯನಟ ಕಪಿಲ್ ಶರ್ಮಾ ಮೇಲೆ ಎಫ್ ಐಆರ್ ದಾಖಲಾಗಿದೆ.

ಮುಂಬೈನ ಹೊರವಲಯದಲ್ಲಿರುವ ವರ್ಸೋವಾದಲ್ಲಿ ಕಪಿಲ್ ಶರ್ಮಾ ಬಂಗಲೆಯನ್ನು ಹೊಂದಿದ್ದಾರೆ. ಈ ಬಂಗಲೆಯ ಹಿಂದಿರುವ ಮ್ಯಾಂಗ್ರೋವ್ ಮರಗಳನ್ನು ಕಡಿದು ಅಲ್ಲಿ ಅಕ್ರಮವಾಗಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪರಿಸರ ರಕ್ಷಣಾ ಕಾಯ್ದೆ ಹಾಗೂ ಎಂಆರ್ ಟಿಪಿ ಕಾಯ್ದೆಯಡಿಯಲ್ಲಿ ಕಪಿಲ್ ಶರ್ಮಾ ಮೇಲೆ ಎಫ್ ಐಆರ್ ಹಾಕಲಾಗಿದೆ.