ಹಲ್ಲೆ ಮಾಡಿದ ಆರೋಪದ ಮೇಲೆ ಪ್ರವೀಣ್ ಎಂಬಾತ ದೂರು ನೀಡಿದ ಆಧಾರದ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಬಾಬು ವಿರುದ್ದ ಐಪಿಸಿ ಸೆಕ್ಷನ್ 506,341,323,342,504,34 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು(ಡಿ.12): ಆಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ, ಹಳೆ ರೌಡಿ ಶೀಟರ್ ಬೊಮ್ಮನಹಳ್ಳಿ ಬಾಬು ವಿರುದ್ದ ಎಫ್ಐಆರ್ ದಾಖಲಾಗಿದೆ. ಹಲ್ಲೆ ಮಾಡಿದ ಆರೋಪದ ಮೇಲೆ ಪ್ರವೀಣ್ ಎಂಬಾತ ದೂರು ನೀಡಿದ ಆಧಾರದ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಬಾಬು ವಿರುದ್ದ ಐಪಿಸಿ ಸೆಕ್ಷನ್ 506,341,323,342,504,34 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕಳೆದ ತಿಂಗಳು 13ರಂದು ಬೊಮ್ಮನಹಳ್ಳಿ ಬಾಬು ಕ್ವೀನ್ಸ್ ರಸ್ತೆಯ ಅಟ್ಟಿಕಾ ಗೋಲ್ಡ್ ಕಂಪನಿಗೆ ಕರೆಯಿಸಿಕೊಂಡು ಅಲ್ಲಿನ ಸೀಕ್ರೇಟ್ ಕೊಠಡಿಯಲ್ಲಿ ಕಂಪನಿಯ ಗೌಪ್ಯ ಮಾಹಿತಿಗಳನ್ನು ಹೊರಗೆ ತಿಳಿಸಿದ್ದೀಯ ಎಂದು ಬೌನ್ಸ್'ರ್'ಗಳಿಂದ ಹಲ್ಲೆ ಮಾಡಿಸಿರುವುದಾಗಿ ಪ್ರವೀಣ್ ದೂರು ನೀಡಿದ್ದಾರೆ.
