ಕೇಂದ್ರ ಸರ್ಕಾರ ನೋಟ್​​ ಬ್ಯಾನ್​ ಮಾಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿತ್ತು. ಇದನ್ನು ಅನುಷ್ಠಾನಕ್ಕೆ ತರಬೇಕಾದರೆ ಬ್ಯಾಂಕ್​ಗಳ ಕೊಡುಗೆ ಭಾರೀ ಇತ್ತು. ಆದರೆ ಕೆಲವು ಬ್ಯಾಂಕ್​'ಗಳ ಅಧಿಕಾರಿಗಳು ಮಾತ್ರ ಮಾಡಬಾರದ್ದನ್ನು ಮಾಡಿದವು. ದುಡ್ಡಿಗೆ ಆಸೆ ಬಿದ್ದ ಕೆಲವು ಅಧಿಕಾರಿಗಳು ಕೋಟಿಗಟ್ಟಲೇ ಹಣವನ್ನು ಕಾಳಧನಿಕರ ಖಜಾನೆಗಳಿಗೆ ರವಾನಿಸಿದ್ದಾರೆ. ಇದು ಸಿಬಿಐ ತನಿಖೆಯಲ್ಲಿ ಸಾಬೀತು ಆಗಿದೆ. ಎಫ್​ಐಆರ್ ಕೂಡಾ ದಾಖಲಾಗಿದೆ.

ಬೆಂಗಳೂರು(ಡಿ.23): ಕೇಂದ್ರ ಸರ್ಕಾರ ನೋಟ್​​ ಬ್ಯಾನ್​ ಮಾಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿತ್ತು. ಇದನ್ನು ಅನುಷ್ಠಾನಕ್ಕೆ ತರಬೇಕಾದರೆ ಬ್ಯಾಂಕ್​ಗಳ ಕೊಡುಗೆ ಭಾರೀ ಇತ್ತು. ಆದರೆ ಕೆಲವು ಬ್ಯಾಂಕ್​'ಗಳ ಅಧಿಕಾರಿಗಳು ಮಾತ್ರ ಮಾಡಬಾರದ್ದನ್ನು ಮಾಡಿದವು. ದುಡ್ಡಿಗೆ ಆಸೆ ಬಿದ್ದ ಕೆಲವು ಅಧಿಕಾರಿಗಳು ಕೋಟಿಗಟ್ಟಲೇ ಹಣವನ್ನು ಕಾಳಧನಿಕರ ಖಜಾನೆಗಳಿಗೆ ರವಾನಿಸಿದ್ದಾರೆ. ಇದು ಸಿಬಿಐ ತನಿಖೆಯಲ್ಲಿ ಸಾಬೀತು ಆಗಿದೆ. ಎಫ್​ಐಆರ್ ಕೂಡಾ ದಾಖಲಾಗಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಆಪ್ತ ಅಧಿಕಾರಿಗಳು ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದಿತ್ತು. ಇದರ ಬೆನ್ನಲ್ಲೆ ಸಿಬಿಐ ತನಿಖೆ ನಡೆಸಿ ಸರ್ಕಾರಿ ಅಧಿಕಾರಿ ಜಯಚಂದ್ರ ಸೇರಿದಂತೆ ಗುತ್ತಿಗೆದಾರರ ವಿರುದ್ಧ ಎಫ್​ಆರ್​ ದಾಖಲಾಗಿತ್ತು. ಇದಿಷ್ಟೇ ಅಲ್ಲ ಈ ಪ್ರಕರಣದಲ್ಲಿ ಪ್ರಮುಖವಾಗಿ ಬ್ಯಾಂಕ್​ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿತ್ತು.

ಬ್ಲ್ಯಾಕ್​ &​ ವೈಟ್ ದಂಧೆಯಲ್ಲಿ ಬ್ಯಾಂಕ್​ಗಳು

ಬ್ಲ್ಯಾಕ್ & ವೈಟ್ ದಂಧೆಯಲ್ಲಿ ಬೆಂಗಳೂರಿನ ಇಂದಿರಾನಗರ ಕರ್ಣಾಟಕ ಬ್ಯಾಂಕ್​​ ​​ಶಾಖೆಯ ಚೀಫ್ ಜನರಲ್ ಮ್ಯಾನೆಜರ್ ಸೂರ್ಯನಾರಯಣ ಬ್ಯಾರಿ. ಎರಡನೇಯವರಾಗಿ ಬೆಂಗಳೂರಿನ ಜೆ.ಸಿ.ರಸ್ತೆಯ ಧನಲಕ್ಷ್ಮಿ ಶಾಖೆಯ ವ್ಯವಸ್ಥಾಪಕ ಉಮಾಶಂಕರ್ ರೇಣುಕಾ ಹೆಸರಲ್ಲಿ ಸಿಬಿಐ ಉಲ್ಲೇಖಿಸಿತ್ತು. ಖಾಸಗಿ ಬ್ಯಾಂಕ್​​​​ ಶಾಖೆಗಳಿಗೆ ಹಣ ತುಂಬುವ ಏಜೆನ್ಸಿಯಾಗಿರೋ ಸೆಕ್ಯೂರ್ ಇಂಡಿಯಾ ವ್ಯಾಲ್ಯೂ ಇಂಡಿಯಾ ಲಿಮಿಟೆಡ್​​ನ ವ್ಯವಸ್ಥಾಪಕ ನಿರ್ದೇಶಕ. ಧನಲಕ್ಷ್ಮಿ ಬ್ಯಾಂಕ್​ನ 32 ಎಟಿಎಂ ಕೇಂದ್ರಗಳಿಗೆ ತುಂಬಬೇಕಿದ್ದ ಹಣ ಖದೀಮರ ಪಾಲಾಗಿದೆ. ಕೋಟ್ಯಂತರ ರೂಪಾಯಿ ಅಕ್ರಮಕ್ಕೆ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಎಲ್ಲಾ ರೀತಿಯಲ್ಲೂ ಸಾಥ್ ನೀಡಿದೆ ಅಂತಲೂ ಸಿಬಿಐ ತನ್ ಎಫ್​ಐಆರ್​ನಲ್ಲಿ ಹೇಳಿದೆ.

SBM ಬ್ಯಾಂಕ್​​ನಲ್ಲಿ ಹಳೆ ನೋಟು ಅಕ್ರಮ ಬದಲಾವಣೆ: ಒಂದೂವರೆ ಕೋಟಿ ಅಕ್ರಮವೆಂದು ಸಿಬಿಐ ಎಫ್​'ಐಆರ್​​

ಇನ್ನು ಚಾಮರಾಜನಗರದ ಕೊಳ್ಳೇಗಾಲ ಎಸ್​ಬಿಎಂ ಶಾಖೆ ಅಧಿಕಾರಿ ನೋಟು ಬದಲಾವಣೆ ವೇಳೆಯಲ್ಲಿ ಅಕ್ರಮ ಚಟುವಟಿಕೆ ಮತ್ತು ಕ್ರಿಮಿನಲ್ ಸಂಚಿನಲ್ಲಿ ಭಾಗಿಯಾಗಿರುವುದು ಖಚಿತಪಟ್ಟಿದೆ. ನೋಟು ಬದಲಾವಣೆ ಅಕ್ರಮ ಚಟುವಟಿಕೆಗಳಲ್ಲಿ ಬ್ಯಾಂಕ್‌ಗಳಲ್ಲಿ ಮುಖ್ಯ ಪ್ರಬಂಧಕರಲ್ಲದೆ, ನಗದು ಗುಮಾಸ್ತರು ಸೇರಿದಂತೆ ಬ್ಯಾಂಕ್‌ಗಳ ಇತರೆ ಸ್ತರದ ಅಧಿಕಾರಿ, ನೌಕರರು ಕೂಡ ಭಾಗಿ ಆಗಿರುವುದನ್ನು ಸಿಬಿಐನ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಕೊಳ್ಳೇಗಾಲ ಎಸ್​ಬಿಎಂ ಕ್ಯಾಷಿಯರ್ ವಿರುದ್ಧ FIR

ಒಂದೂವರೆ ಕೋಟಿ ಕಪ್ಪುಹಣ ವೈಟ್ ಮಾಡಿಕೊಟ್ಟ ಆರೋಪದ ಮೇಲೆ ಕೊಳ್ಳೆಗಾಲ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ ಶಾಖೆಯ ಸೀನಿಯರ್ ಕ್ಯಾಷಿಯರ್​ ಪರಶಿವಮೂರ್ತಿ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ಎಫ್‌ಐಆರ್ ದಾಖಲಿಸಿಕೊಂಡಿದೆ.

ಕಮಿಷನ್ ಪಡೆದು ಒಂದೂವರೆ ಕೋಟಿ ಬದಲಾವಣೆ

ಖಾಸಗಿ ವ್ಯಕ್ತಿಗಳು ಮತ್ತು ಬ್ಯಾಂಕ್‌ ಸಹದ್ಯೋಗಿಗಳ ಜತೆ ಸೇರಿ ಕ್ರಿಮಿನಲ್ ಸಂಚು ರೂಪಿಸಿ 1 ಕೋಟಿ 51 ಲಕ್ಷದ 24 ಸಾವಿರ ರೂಪಾಯಿ ಹಳೆಯ ನೋಟುಗಳನ್ನು ಬದಲಾಯಿಸಿ ಹಣದ ರೂಪದಲ್ಲಿ ಲಾಭ ಪಡೆದಿರೋದು ಸಿಬಿಐ ಪತ್ತೆ ಹಚ್ಚಿತ್ತು. 

ಚಿತ್ರದುರ್ಗದ ಬ್ಯಾಂಕ್​ಗಳಲ್ಲೂ ನಡೆದಿತ್ತು ದಂಧೆ : ಎಸ್​'ಬಿಐ ಮತ್ತು ಐಸಿಐಸಿಐನಲ್ಲಿ ಅವ್ಯವಹಾರ.

ಚಿತ್ರದುರ್ಗದಲ್ಲಿ ಬಾತ್​ ರೂಂ ಛೇಂಬರ್​'ನಲ್ಲಿ ಹಣವಿಟ್ಟು ಸಿಕ್ಕಿಹಾಕಿಕೊಂಡಿದ್ದ ಕೆ. ಸಿ. ವೀರೇಂದ್ರಗೆ ಬ್ಯಾಂಕ್​'ಗಳು ನೆರವು ನೀಡಿದ್ದವು. ವೀರೇಂದ್ರಗೆ ಐಸಿಐಸಿಐ ಮತ್ತು ಎಸ್​ಬಿಐ ಬ್ಯಾಂಕ್ ಸಾಥ್​ ನೀಡಿದ್ದವು ಅನ್ನೋದು ಸಿಬಿಐ ವಿಚಾರಣೆ ವೇಳೆ ಬಯಲಾಗಿತ್ತು.

ಇದು ಕರ್ನಾಟಕದಲ್ಲಿ ನಡೆದಿರುವ ಲೆಕ್ಕ ಆದರೆ ದೇಶಾದ್ಯಂತ ಌಕ್ಸಿಸ್ ಬ್ಯಾಂಕ್, ಎಚ್​'ಡಿಎಫ್​'ಸಿ ಬ್ಯಾಂಕ್, ಕರ್ನಾಟಕ ಬ್ಯಾಂಕ್​ ಹೀಗೆ. ಹಲವಾರು ಬ್ಯಾಂಕ್​​ ಅಧಿಕಾರಿಗಳು ಈ ದಂಧೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಒಂದೆಡೆ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟು ನೋಟ್​ ಬ್ಯಾನ್ ಮಾಡಿದರೆ ಕೆಲವು ಬ್ಯಾಂಕ್ ಅಧಿಕಾರಿಗಳು ಇಲ್ಲೂ ಅಕ್ರಮಗಳನ್ನು ಮಾಡಿದರು.

ಒಟ್ಟಿನಲ್ಲಿ ಕೆಲವು ಬ್ಯಾಂಕ್ ಅಧಿಕಾರಿಗಳ ಕುಕೃತ್ಯಕ್ಕೆ ಬ್ಯಾಂಕ್​'ಗಳ ಮೇಲಿದ್ದ ನಂಬಿಕೆಯೂ ಮಣ್ಣು ಪಾಲಾಯಿತು. ಜೊತೆಗೆ ಬಡವರು ಹಣ ಸಿಗದೆ ಪರದಾಡುವಂತಾಯಿತು.