ಕಳೆದ ವರ್ಷ ಸಿಪಿಲಾ 5 ಸಾವಿರ ಕಿ.ಮೀ. ಹಾರಾಟ ನಡೆಸಿದ್ದಾರೆ. ಐರೋಪ್ಯ ನಾಯಕರನ್ನು ಭೇಟಿಯಾಗಲು ಈ ವೇಳೆ ಅವರು ಯುರೋಪ್‌ ಒಕ್ಕೂಟದ ಪ್ರವಾಸ ಕೈಗೊಂಡಿದ್ದರು.

ಹೆಲ್ಸಿಂಕಿ: ಜಾನ್‌ ಟ್ರಾವೊಲ್ಟಾಮತ್ತು ಟಾಮ್‌ ಕ್ರೂಸ್‌'ರಂಥ ಸೆಲೆಬ್ರಿಟಿಗಳು ತಮ್ಮದೇ ವಿಮಾನವನ್ನು ತಾವೇ ಚಲಾಯಿಸುವುದಕ್ಕೆ ಸುದ್ದಿಯಾಗಿದ್ದಾರೆ. ಆದರೆ ಒಂದು ದೇಶದ ಪ್ರಮುಖರಾಗಿಯೂ, ಫಿನ್ಲೆಂಡ್‌'ನ ಪ್ರಧಾನಿ ಜುಹಾ ಸಿಪಿಲಾ ಅವರು ತಮ್ಮ ವಿಮಾನವನ್ನು ತಾವೇ ಚಲಾಯಿಸುವ ಮೂಲಕ, ಪ್ರಯಾಣ ವೆಚ್ಚದ ಪ್ರಮಾಣ ಕೊಂಚ ತಗ್ಗಿಸುವ ಯತ್ನ ನಡೆಸಿದ್ದಾರೆ.

ತೆರಿಗೆದಾರರ ಹಣದ ಉಳಿತಾಯ ಮತ್ತು ದುಂದು ವೆಚ್ಚ ತಡೆಯುವ ಬದ್ಧತೆಯನ್ನು ಘೋಷಿಸಿರುವ ಸಿಪಿಲ ಕೆಲವೊಮ್ಮೆ ತಮ್ಮ ಅಧಿಕೃತ ಪ್ರವಾಸಗಳಿಗೂ ಬಾಡಿಗೆಗೆ ಖಾಸಗಿ ಜೆಟ್‌ ಪಡೆದುಕೊಂಡು ಅದಕ್ಕೆ ತಾವೇ ಪೈಲಟ್‌ ಆಗುತ್ತಾರೆ. 2015ರ ಮೇಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಸಿಪಿಲ 19 ಬಾರಿ ಫಿನ್ಲೆಂಡ್‌ ಮತ್ತು ವಿದೇಶಿ ಪ್ರವಾಸಗಳ ಸಂದರ್ಭ ತಾವೇ ವಿಮಾನ ಚಲಾಯಿಸಿದ್ದಾರೆ. ಅಧಿಕೃತ ಪ್ರವಾಸಕ್ಕೆ ಖಾಸಗಿ ಜೆಟ್‌ ಬಳಸಿದ್ದಕ್ಕೆ ಅದರ ಶುಲ್ಕವನ್ನು ತಾವೇ ಭರಿಸಿದ್ದಾರೆ. ಎಷ್ಟು ಶುಲ್ಕ ಭರಿಸಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಕಳೆದ ವರ್ಷ ಸಿಪಿಲಾ 5 ಸಾವಿರ ಕಿ.ಮೀ. ಹಾರಾಟ ನಡೆಸಿದ್ದಾರೆ. ಐರೋಪ್ಯ ನಾಯಕರನ್ನು ಭೇಟಿಯಾಗಲು ಈ ವೇಳೆ ಅವರು ಯುರೋಪ್‌ ಒಕ್ಕೂಟದ ಪ್ರವಾಸ ಕೈಗೊಂಡಿದ್ದರು. ಮೃದುಭಾಷಿಯಾದ ಸಿಪಿಲಾ ಅವರು ಫಿನ್ಲೆಂಡ್‌ ಪ್ರಧಾನಿಯಾಗುವುದಕ್ಕೂ ಮೊದಲು ಐಟಿ ಉದ್ಯಮಿಯಾಗಿದ್ದರು.

epaper.kannadaprabha.in