ಗಣಪತಿಯನ್ನು ಕೇಳಿದ್ದನ್ನೆಲ್ಲಾ ಕೊಡುವ ದೇವರು ಎಂದು ಜನ ಕೊಂಡಾಡುತ್ತಾರೆ. ಗಣಪತಿಗೆ ವಿಧೇಯರಾಗಿ ಜನ ನಡೆದುಕೊಳ್ಳುತ್ತಾರೆ. ಆದರೆ ಮುಂಬೈನಲ್ಲಿ ಗಣಪತಿಗೇ ದಂಡ ಹಾಕಿದ ಘಟನೆ ನಡೆದಿದೆ.

ಮುಂಬೈ: ಗಣಪತಿಯನ್ನು ಕೇಳಿದ್ದನ್ನೆಲ್ಲಾ ಕೊಡುವ ದೇವರು ಎಂದು ಜನ ಕೊಂಡಾಡುತ್ತಾರೆ. ಗಣಪತಿಗೆ ವಿಧೇಯರಾಗಿ ಜನ ನಡೆದುಕೊಳ್ಳುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಮುಂಬೈನಲ್ಲಿ ಗಣಪತಿಗೇ ದಂಡ ಹಾಕಿದ ಘಟನೆ ನಡೆದಿದೆ. ಅದರಲ್ಲೂ ಮುಂಬೈನ ಪ್ರಸಿದ್ಧ ಗಣಪನ ಪೈಕಿ ಒಬ್ಬನಾದ ಲಾಲ್‌ಬಾಗ್‌ಚಾ ಗಣಪತಿಗೆ 5 ಲಕ್ಷ ರು. ದಂಡ ವಿಧಿಸಲಾಗಿದೆ.

ಇದೇಕೆ ಗಣಪತಿಗೆ ದಂಡ ಎಂದಿರಾ? ಮುಂಬೈನಲ್ಲಿ ಸಾರ್ವಜನಿಕ ಗಣಪತಿ ಕೂರಿಸುವ ವೇಳೆ ವಿವಿಧ ಕಾರಣಗಳಿಗಾಗಿ ಆಯೋಜಕರು ಹೇಗೆಂದರೆ ಹಾಗೆ ರಸ್ತೆಯನ್ನು ಅಗೆದುಹಾಕಿದ್ದಾರೆ. ಹೀಗಾಗಿ ಇಂಥ ಎಲ್ಲಾ ಸಂಘಟನೆಗಳಿಗೆ ಮುಂಬೈ ಮಹಾನಗರ ಪಾಲಿಗೆ ಭಾರೀ ದಂಡ ವಿಧಿಸಿದೆ.

ಈ ಪೈಕಿ ಲಾಲ್‌ಬಾಗ್‌ಚಾ ಗಣಪತಿಗೂ 4.86 ಲಕ್ಷ ರು. ದಂಡ ಹಾಕಲಾಗಿದೆ.

(ಸಾಂದರ್ಭಿಕ ಚಿತ್ರ)