ಎರಡು ದಿನಗಳ ಕಾಲ ಸತತ ಹುಡುಕಾಟದ ನಂತರ ಜಲಾಶಯದಲ್ಲಿ ಉದಯ್ ಶವ ಸಿಕ್ಕಿದ್ದು ಈ ಸಂದರ್ಭದಲ್ಲಿ ಮಾತನಾಡಿದ ದುನಿಯಾ ವಿಜಯ್, ಈ ಟೆಷನ್ ನಲ್ಲಿ ಮಾತನಾಡಲು ಸಾಧ್ಯವಾಗಿರಲಿಲ್ಲ, ಇದಕ್ಕಾಗಿ ಕ್ಷಮೆಇರಲಿ ಎಂದಿದ್ದಾರೆ. 

ಬೆಂಗಳೂರು(ನ,09): ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್​ನಿಂದ ಹಾರಿದ್ದ ಖಳನಟರಿಬ್ಬರು ಸಾವನ್ನಪ್ಪಿದ್ದ ಸಂದರ್ಭದಲ್ಲಿ ಅವರೊಂದಿಗೆ ನೀರಿಗೆ ಧುಮುಕಿದ್ದ ನಟ ದುನಿಯಾ ವಿಜಯ್ ಘಟನೆ ನಡೆದಾಗಿನಿಂದ ಮೌನಕ್ಕೇ ಶರಣಾಗಿದ್ದರು, ಇಂದು ಉದಯ್ ಶವ ಸಿಕ್ಕ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. 

ಎರಡು ದಿನಗಳ ಕಾಲ ಸತತ ಹುಡುಕಾಟದ ನಂತರ ಜಲಾಶಯದಲ್ಲಿ ಉದಯ್ ಶವ ಸಿಕ್ಕಿದ್ದು ಈ ಸಂದರ್ಭದಲ್ಲಿ ಮಾತನಾಡಿದ ದುನಿಯಾ ವಿಜಯ್, ಈ ಟೆಷನ್ ನಲ್ಲಿ ಮಾತನಾಡಲು ಸಾಧ್ಯವಾಗಿರಲಿಲ್ಲ, ಇದಕ್ಕಾಗಿ ಕ್ಷಮೆಇರಲಿ ಎಂದಿದ್ದಾರೆ. 

ಇನ್ನೊಬ್ಬ ನಟ ಅನಿಲ್ ಶವದ ಹುಡುಕಾಟವು ಮುಂದುವರೆದಿದ್ದು, ಶವ ಸಂಸ್ಕಾರದ ಕುರಿತು ಯಾವುದೇ ಮಾಹಿತಿ ಇಲ್ಲ ಎಂದ ವಿಜಯ್, ಅವರಿಬ್ಬರು ಕುಟುಂಬದವರು ಅದನ್ನು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದರು. ಇಲ್ಲದೇ ಪೊಲೀಸ್ ಅಧಿಕಾರಿಗಳ ಅಣತಿಯಂತೆ ಮುಂದಿನ ಕೆಲಸ ಗಳನ್ನು ನಡೆಸುವುದಾಗಿ ತಿಳಿಸಿದ್ದಾರೆ.