ಬೆಂಗಳೂರು(ಅ.07): ಬಿಗ್'ಬಾಸ್-4 ರಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಹೆಸರುಗಳನ್ನು ತಿಳಿದುಕೊಳ್ಳುವ ಕುರತೂಹಲ ಹಲವರನ್ನು ಕಾಡುತ್ತಿದೆ. ಆದರೆ ಈ ಕುರಿತಾಗಿ ಸಾಕಷ್ಟು ಗೌಪ್ಯತೆ ಕಾಪಾಡಿಕೊಂಡಿದ್ದು ಸ್ಪರ್ಧಾಳುಗಳ ಹೆಸರುಗಳನ್ನು ಎಲ್ಲೂ ತಿಳಿಸಿರಲಿಲ್ಲ. ಆದರೆ ಬಿಗ್ ಬಾಸ್-4 ಆರಂಭವಾಗಲು ಇನ್ನೆರಡು ದಿನಗಳಿರುವಾಗಲೇ ಈ ಸ್ಪರ್ಧಾಳುಗಳ ಹೆಸರಿನ ಪಟ್ಟಿ ಬಹಿರಂಗಗೊಂಡಿದ್ದು, ಜನರ ಕುತೂಹಲಕ್ಕೆ ತೆರೆ ಬಿದ್ದಿದೆ. ಇನ್ನು ಈ ಸ್ಪರ್ಧಾಳುಗಳ ಫೇಸ್'ಬುಕ್ ಪೇಜ್'ನಲ್ಲೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಬಿಗ್ಬಾಸ್ 15 ಮಂದಿ ಫೈನಲಿಸ್ಟ್'ಗಳ ವಿವರ:
1) ಮಾಳವಿಕ ಅವಿನಾಶ್ (ನಟಿ, ರಾಜಕಾರಿಣಿ)
2) ಕಾರುಣ್ಯ ರಾಮ್ (ನಟಿ)
3) ಮೋಹನ್ (ನಟ, ನಿರ್ದೇಶಕ)
4) ಚೈತ್ರಾ (ಸಿಂಗರ್)
5) ಶೀತಲ್ ಶೆಟ್ಟಿ (ನಿರೂಪಕಿ, ನಟಿ)
6) ಕಿರಿಕ್ ಕೀರ್ತಿ (ಪತ್ರಕರ್ತ)
7) ಸ್ಪರ್ಶರೇಖಾ (ಸ್ಪರ್ಶ ಸಿನಿಮಾದಲ್ಲಿ ನಟಿಸಿದ ನಟಿ)
8) ನಿರಂಜನ್ ದೇಶ್'ಪಾಂಡೆ (ನಿರೂಪಕ)
9) ಸಂಜನಾ (ಕಿರುತೆರೆ ನಟಿ)
10) ವಾಣಿಶ್ರೀ (ಕಿರುತೆರೆ ನಟಿ)
11) ಕಾವ್ಯ ಶಾ (ನಟಿ)
12) ಭುವನ್ ಪೊನ್ನಣ್ಣ (ನಟ)
13) ದೊಡ್ಡ ಗಣೇಶ್ (ಮಾಜಿ ಕ್ರಿಕೆಟರ್)
14) ಪ್ರಥಮ್ (ನಿರ್ದೇಶಕ)
15) ಶಾಲಿನಿ (ಹಾಸ್ಯನಟಿ)
