ನಾಳೆ ಬೆಳಿಗ್ಗೆ 10.30ಕ್ಕೆ  ಒಟ್ಟು 9 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

ನವದೆಹಲಿ(ಸೆ.02): ನಾಳೆ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜ್ಯದಿಂದ ಮಂತ್ರಿಯಾಗ ಬಯಸಿದ್ದ ಸಂಸದರಿಗೆ ಶಾಕ್ ಆಗಿದ್ದಾರೆ. ರಾಜ್ಯದ ಕೋಟದಿಂದ ಕೇಂದ್ರದಲ್ಲಿ 3 ಅಥವಾ 4 ಮಂದಿ ಮಂತ್ರಿಯಾಗ ಬಯಸಿದ್ದವರ ಆಸೆ ನಿರಾಸೆಯಾಗಿದ್ದು, ಹೆಸರೆ ಇಲ್ಲದ ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ದೊರಯಲಿದೆ.

ನಾಳೆ ಬೆಳಿಗ್ಗೆ 10.30ಕ್ಕೆ ಒಟ್ಟು 9 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಕೇಂದ್ರ ಸಚಿವರಾಗಲಿದ್ದಾರೆ. ಇನ್ನುಳಿದಂತೆ ವಿವಿಧ ರಾಜ್ಯದಿಂದ ಶಿವಪ್ರಸಾದ್, ಸತ್ಯಪಾಲ್ ಸಿಂಗ್, ಅಶ್ವಿನಿ ಕುಮಾರ್ ಚೌಬೆ, ವೀರೇಂದ್ರ ಕುಮಾರ್​, ಹರ್​ದೀಪ್​ ಸಿಂಗ್ ಪುರಿ, ಗಜೇಂದ್ರ ಸಿಂಗ್ ಜಿ. ಶೇಖಾವತ್ ಹಾಗೂ ರಾಜ್​​ಕುಮಾರ್ ಸಿಂಗ್ ಮಂತ್ರಿ ಸ್ಥಾನ ಸಿಗಲಿದೆ.