ಚಿತ್ರತಂಡವೊಂದು ಮೈಸೂರು ಅರಮನೆ ಆವರಣದಲ್ಲಿ ಅನುಮತಿಯಿಲ್ಲದೇ ಡ್ರೋನ್ ಕ್ಯಾಮರ ಬಳಸಿದೆ. ಪೊಲೀಸರು ಸ್ಥಳಕ್ಕೆ ಬಂದಾಗ ಡ್ರೋನ್ ಕ್ಯಾಮರಾ ಜತೆ ಪರಾರಿಯಾಗಿದ್ದಾರೆ.

ಮೈಸೂರು (ಮೇ.16): ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಚಿತ್ರತಂಡವೊಂದು ಅನುಮತಿ ಇಲ್ಲದೆ ಡ್ರೋನ್ ಕ್ಯಾಮರಾ ಬಳಕೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜರಾಣಿ ಚಲನಚಿತ್ರದ ಚಿತ್ರೀಕರಣ ವೇಳೆ ಡ್ರೋನ್ ಕ್ಯಾಮರಾ ಬಳಕೆ ಮಾಡಲಾಗಿದ್ದು ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಡ್ರೋನ್​ ಕ್ಯಾಮರಾ ಹಾರಾಟ ನಡೆಸಿದೆ.

ಅದನ್ನು ಗಮನಿಸಿದ ಪ್ರವಾಸಿಗರು ಮೈಸೂರಿನ ದೇವರಾಜ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ಯಾಮರಾ ವಶಕ್ಕೆ ಪಡೆಯಲು ಹೋದಾಗ ಚಿತ್ರತಂಡದವರು ಕ್ಯಾಮರಾ ಸಹಿತ ಪರಾರಿಯಾಗಿದ್ದಾರೆ.

ಕೋಟೆ ಆಂಜನೇಯ ದೇವಸ್ಥಾನದ ಎದುರು ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರಿಕರಣಕ್ಕೆ ಅನುಮತಿ ಪಡೆದಿದ್ದರೂ ಡ್ರೋನ್ ಕ್ಯಾಮರಾವನ್ನು ಬಳಸುವಂತಿಲ್ಲ. ಪೊಲೀಸರು ಶೂಟಿಂಗ್​​ ಸ್ಥಳದಲ್ಲಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.