Asianet Suvarna News Asianet Suvarna News

'ಭೂಮಿಪುತ್ರ': ಹೆಚ್'ಡಿಕೆ ಲೈಫ್ ಸ್ಟೋರಿ - ಈ ವರ್ಷಾಂತ್ಯಕ್ಕೆ ತೆರೆಗೆ?

'ಭೂಮಿಪುತ್ರ' ಹೆಸರಿನಲ್ಲಿ ಬರಲಿರುವ ಈ ಸಿನಿಮಾಗೆ ಮೇ 8 ರಂದು ಅದ್ಧೂರಿ ಮುಹೂರ್ತ ನೆರವೇರಲಿದೆ. ಮೇ 27 ರಿಂದ ಚಿತ್ರೀಕರಣ ಆರಂಭಗೊಳ್ಳಲಿದ್ದು 100 ಕ್ಕೂ ಹೆಚ್ಚು ದಿನದ ಶೂಟಿಂಗ್ ಪ್ಲಾನ್ ಹಾಕಲಾಗಿದೆ.

film in kannada based on political life of hdk
  • Facebook
  • Twitter
  • Whatsapp

ಬೆಂಗಳೂರು: ಜೆಡಿಎಸ್ ಮುಖಂಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಜೀವನದ ಕಥೆಯು ಬೆಳ್ಳಿ ತೆರೆಗೆ ಬರಲಿದೆ. 20 ತಿಂಗಳ ಎಚ್'​ಡಿಕೆ ಆಡಳಿತಾವಧಿಯನ್ನು ಸಿನಿಮಾ ಮೂಲಕ ತೆರೆಗೆ ತರಲು ನಿರ್ದೇಶಕ ಎಸ್.ನಾರಾಯಣ್ ತಯಾರಾಗಿದ್ದಾರೆ.

'ಭೂಮಿಪುತ್ರ' ಹೆಸರಿನಲ್ಲಿ ಬರಲಿರುವ ಈ ಸಿನಿಮಾಗೆ ಮೇ 8 ರಂದು ಅದ್ಧೂರಿ ಮುಹೂರ್ತ ನೆರವೇರಲಿದೆ. ಮೇ 27 ರಿಂದ ಚಿತ್ರೀಕರಣ ಆರಂಭಗೊಳ್ಳಲಿದ್ದು 100 ಕ್ಕೂ ಹೆಚ್ಚು ದಿನದ ಶೂಟಿಂಗ್ ಪ್ಲಾನ್ ಹಾಕಲಾಗಿದೆ. ಕುಮಾರಸ್ವಾಮಿ ಅವರ ಸಿಎಂ ಪಾತ್ರಕ್ಕೆ ಅರ್ಜುನ್ ಸರ್ಜಾ ಜೀವ ತುಂಬಲಿದ್ದಾರೆ. ಎಸ್.ನಾರಾಯಣ್ ಈ ಚಿತ್ರದ ನಿರ್ದೇಶನದ ಜೊತೆಗೆ ಸಂಗೀತವನ್ನೂ ಕೊಡುತ್ತಿದ್ದಾರೆ.

Follow Us:
Download App:
  • android
  • ios