ಆದಾಯ ರಿಟರ್ನ್ಸ್'ಅನ್ನು ಆನ್'ಲೈನ್(ಇ-ಫೈಲಿಂಗ್) ಅಥವಾ ಖುದ್ದಾಗಿ ಜುಲೈ 31ರೊಳಗೆ ಸಲ್ಲಿಸಬೇಕು. ಆನ್'ಲೈನ್ ಮೂಲಕ ಸಲ್ಲಿಸುವುದು ಅತೀ ಸುಲಭ ಹಾಗೂ ಎಲ್ಲ ತೆರಿಗೆ ಪಾವತಿದಾರರು ಮಾಡಬಹುದು. ಆದಾಗ್ಯೂ,ನಿಮ್ಮ ಆದಾಯ 5 ಲಕ್ಷ ಅಥವಾ ಅದಕ್ಕಿಂತ ಮೇಲ್ಪಟ್ಟಿದ್ದರೆ ನೀವು ಆನ್'ಲೈನ್ ಮೂಲಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಭಾರತದ ಹೊರಗೆ ವೈಯುಕ್ತಿಕವಾಗಿ ಆಸ್ತಿ ಹೊಂದಿರುವವರು ಅವರ ಆದಾಯವನ್ನು ಆಡಿಟ್ ಒದಗಿಸಬೇಕಿರುತ್ತದೆ ಹಾಗೂ ಇದರ ಆದಾಯ ರಿಟರ್ನ್ಸ್'ನ್ನು ಆನ್'ಲೈನ್'ನಲ್ಲಿಯೇ ಸಲ್ಲಿಸಬೇಕು. ವೈಯುಕ್ತಿಕವಾಗಿ ಸಲ್ಲಿಸುವುದಕ್ಕಿಂತ ಯಾವ ಸ್ಥಳದಿಂದ ಅಲ್ಲವೇ ಯಾವುದೇ ಸಮಯದಲ್ಲೂ ಆನ್'ಲೈನ್'ನಲ್ಲಿ ಸಲ್ಲಿಸುವುದು ಉತ್ತಮ.

ಮೊದಲ ಬಾರಿ ತೆರಿಗೆ ಸಲ್ಲಿಸುವಿಕೆಯ ಪ್ರಕ್ರಿಯೆಯನ್ನು ಸುಲಭಗೊಳಿಸುವ ಪ್ರಮುಖ ಅಂಶಗಳು

ಮೊದಲಬಾರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ರೋಮಾಂಚನ ಅನುಭವವೇ ಸರಿ. ಇದೆ ಸಮಯಕ್ಕೆ ನಿಮಗೆ ಸರ್ಕಾರದ ವಿನಾಯಿತಿಗಳು, ವಿವಿಧ ನಿಯಮಗಳು, ತೆರಿಗೆ ದರಗಳು, ಅಂತಿಮ ದಿನಾಂಕ ಮುಂತಾದವುಗಳ ಬಗ್ಗೆ ಗೊಂದಲ ಹಾಗೂ ಕೊಂಚಮಟ್ಟಿನ ಭಯವಿದ್ದೆ ಇರುತ್ತದೆ.

ನೀವು 2.5 ಲಕ್ಷ ರೂ. ಮೇಲ್ಪಟ್ಟ ಆದಾಯ ಹೊಂದಿದ್ದರೆ ಮಾತ್ರ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅಗತ್ಯವಿರುತ್ತದೆ. ನಿಮ್ಮ ಒಟ್ಟು ಆದಾಯ ವೇತನ, ಗೃಹ ಆದಾಯ,ಬಂಡವಾಳ ಲಾಭಗಳು, ವ್ಯವಹಾರಗಳು ಹಾಗೂ ವೃತ್ತಿ ಹಾಗೂ ಇತರೆ ಯಾವುದೇ ಮೂಲದ ಆದಾಯ ಒಳಗೊಂಡಿರಬೇಕು. ಒಂದು ವೇಳೆ ನೀವು ಆದಾಯ ರಿಟರ್ನ್ಸ್ ಸಲ್ಲಿಸದಿದ್ದರೆ ಆದಾಯ ತೆರಿಗೆ ಇಲಾಖೆಯಿಂದ ದಂಡ ಪಾವತಿಸಬೇಕಾಗುತ್ತದೆ. ನಿಮಗೆ ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯವಿದ್ದರೆ ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ. ಆದಾಗ್ಯೂ ನೀವು ಆದಾಯ ತೆರಿಗೆ ಪಾವತಿಸುವುದು ಒಂದು ರೀತಿಯಲ್ಲಿ ಆರ್ಥಿಕ ವ್ಯವಹಾರಗಳ ದೃಷ್ಟಿಯಿಂದ ಒಳ್ಳೆಯದು.

ಆದಾಯ ರಿಟರ್ನ್ಸ್'ಅನ್ನು ಆನ್'ಲೈನ್(ಇ-ಫೈಲಿಂಗ್) ಅಥವಾ ಖುದ್ದಾಗಿ ಜುಲೈ 31ರೊಳಗೆ ಸಲ್ಲಿಸಬೇಕು. ಆನ್'ಲೈನ್ ಮೂಲಕ ಸಲ್ಲಿಸುವುದು ಅತೀ ಸುಲಭ ಹಾಗೂ ಎಲ್ಲ ತೆರಿಗೆ ಪಾವತಿದಾರರು ಮಾಡಬಹುದು. ಆದಾಗ್ಯೂ,ನಿಮ್ಮ ಆದಾಯ 5 ಲಕ್ಷ ಅಥವಾ ಅದಕ್ಕಿಂತ ಮೇಲ್ಪಟ್ಟಿದ್ದರೆ ನೀವು ಆನ್'ಲೈನ್ ಮೂಲಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಭಾರತದ ಹೊರಗೆ ವೈಯುಕ್ತಿಕವಾಗಿ ಆಸ್ತಿ ಹೊಂದಿರುವವರು ಅವರ ಆದಾಯವನ್ನು ಆಡಿಟ್ ಒದಗಿಸಬೇಕಿರುತ್ತದೆ ಹಾಗೂ ಇದರ ಆದಾಯ ರಿಟರ್ನ್ಸ್'ನ್ನು ಆನ್'ಲೈನ್'ನಲ್ಲಿಯೇ ಸಲ್ಲಿಸಬೇಕು. ವೈಯುಕ್ತಿಕವಾಗಿ ಸಲ್ಲಿಸುವುದಕ್ಕಿಂತ ಯಾವ ಸ್ಥಳದಿಂದ ಅಲ್ಲವೇ ಯಾವುದೇ ಸಮಯದಲ್ಲೂ ಆನ್'ಲೈನ್'ನಲ್ಲಿ ಸಲ್ಲಿಸುವುದು ಉತ್ತಮ.

ಇ-ಫೈಲಿಂಗ್ ಮಾಡುವ ಪ್ರಕ್ರಿಯೆ ಸುಲಭ ಹಾಗೂ ನೀವೇ ಸ್ವತಃ ಆದಾಯ ತೆರಿಗೆ ಇಲಾಖೆಯ ವೆಬ್'ಸೈಟ್'(https://incometaxindiaefiling.gov.in) ಮೂಲಕ ನೋಂದಣಿ ಮಾಡಿಕೊಂಡು ಸಲ್ಲಿಸುವುದು ಅಥವಾ ವೃತ್ತಿಪರರಿಂದ ಸಹಾಯ ಪಡೆದುಕೊಳ್ಳಬಹುದು.

ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಸರಳವಾಗಿ ಸುಲಭವಾಗಿ ತಿಳಿದುಕೊಳ್ಳುವ ಕೆಲವು ಅಂಶಗಳು

ಆದಾಯ ತೆರಿಗೆ ಶ್ರೇಣಿಗಳು ಹಾಗೂ ಅನುಗುಣವಾದ ತೆರಿಗೆ ದರಗಳು

ಆದಾಯಗಳಿಸುವ ಎಲ್ಲರೂ ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ. ವಾರ್ಷಿಕ 2.5 ಲಕ್ಷ ರೂ.ಆದಾಯ ಕಡಿಮೆಯಿರುವ ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ.

ವಿವಿಧ ರೀತಿಯಯಲ್ಲಿ ಆದಾಯ ಗಳಿಸುವವರಿಗೆ ತೆರಿಗೆ ದರಗಳು ಇಂತಿವೆ.

ವ್ಯಕ್ತಿಗತ ಆದಾಯ ಶ್ರೇಣಿ

ಆದಾಯ ತೆರಿಗೆ ದರ

ವಾರ್ಷಿಕ 2.5 ಲಕ್ಷ ರೂ.ವರೆಗಿರುವವರು

ಇಲ್ಲ

ವಾರ್ಷಿಕ 2.5 ಲಕ್ಷ ರೂ.ನಿಂದ 5 ಲಕ್ಷದವರೆಗೆ

2.5 ಲಕ್ಷ ರೂ. ಮೀರಿದ ಮೊತ್ತಕ್ಕೆ 10%

ವಾರ್ಷಿಕ 5 ಲಕ್ಷ ರೂ.ನಿಂದ 10 ಲಕ್ಷ ರೂ.ಗಳವರೆಗೆ

5 ಲಕ್ಷ ರೂ. ಮೀರಿದ ಮೊತ್ತಕ್ಕೆ 20%

ವಾರ್ಷಿಕ 10 ಲಕ್ಷ ರೂ.ಗೂ ಮೇಲ್ಪಟ್ಟು

10 ಲಕ್ಷ ರೂ. ಮೀರಿದ ಮೊತ್ತಕ್ಕೆ 30%

(ಆರ್ಥಿಕ ವರ್ಷ 16-17ರಲ್ಲಿ ಯಾರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರಿಗೆ ಶೇ. 10 ರಷ್ಟು ತೆರಿಗೆ ದರವಿರುತ್ತದೆ(ವರ್ಷಕ್ಕೆ ಆರ್ಥಿಕ ಶ್ರೀಣಿ 2.5 ಲಕ್ಷ ರೂ.ನಿಂದ 5 ಲಕ್ಷರೂ.ವರೆಗೆ ಇರುತ್ತದೆ). ಆರ್ಥಿಕ ವರ್ಷ 17-18ರಲ್ಲಿ ತೆರಿಗೆ ಸಲ್ಲಿಸುವವರಿಗೆ ಸರ್ಕಾರ ದರ ಪರಿಷ್ಕರಿಸಿದ್ದು, ಶೇ.5 ದರವಿರುತ್ತದೆ.)

ನೀವು ಪಾವತಿಸಬೇಕಾದ ಆದಾಯ ತೆರಿಗೆಯನ್ನು ಹೇಗೆ ತಿಳಿದುಕೊಳ್ಳಬೇಕಾದ ವಿವರ ಇಲ್ಲಿದೆ. ನಿಮಗೆ ವಾರ್ಷಿಕ 12 ಲಕ್ಷ ರೂ. ಆದಾಯವಿದ್ದರೆ ತೆರಿಗೆ ಹೊಣೆಗಾರಿಕೆ ಕೆಳಗಿನಂತಿದ್ದು,ಯಾವುದೇ ತೆರಿಗೆ ಉಳಿತಾಯ ಹೂಡಿಕೆಯಿಲ್ಲ ಎಂದು ಊಹಿಸಲಾಗುತ್ತದೆ ಅಥವಾ ವಿನಾಯಿತಿ ಅನ್ವಯವಾಗುತ್ತದೆ.

2.5 ಲಕ್ಷ ರೂ. ಶೇ.10 = 25 ಸಾವಿರ ರೂ

5 ಲಕ್ಷ ರೂ. ಶೇ.20 = 1 ಲಕ್ಷ ರೂ

2 ಲಕ್ಷ ರೂ. ಶೇ.30 = 60 ಸಾವಿರ ರೂ

ಆದ್ದರಿಂದ ನಿಮ್ಮ ತೆರಿಗೆ ಹೊಣೆಗಾರಿಕೆ 1.85 ಲಕ್ಷ ರೂ. ಈ ತೆರಿಗೆ ಹೊಣೆಗಾರಿಕೆಗೆ ಶೇ.3 ಸೆಸ್ ಅನ್ವಯವಾಗುತ್ತದೆ.

ಕೆಳಗಿನ ಹಲವು ಸೆಕ್ಷನ್'ಗಳು ಹಾಗೂ ವಿಭಾಗಗಳಿಗೆ ವಿನಾಯಿತಿ ಅನ್ವಯವಾಗುತ್ತದೆ

ಕೆಲವು ಸ್ವತ್ತುಗಳಲ್ಲಿ ಹೂಡಿಕೆ ಮಾಡುವವರಿಗೆ ತೆರಿಗೆ ವಿನಾಯಿತಿ ನೀಡಿ ತೆರಿಗೆದಾರರಿಗೆ ಪ್ರೋತ್ಸಾಹಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ತೆರಿಗೆ ಉಳಿತಾಯ ಸ್ವತ್ತುಗಳಲ್ಲಿ ನೀವು 1.5 ಲಕ್ಷದ ವರೆಗೆ ಹೂಡಿಕೆ ಮಾಡಿದ್ದರೆ ನೀವು ಸೆಕ್ಷನ್ 80ಸಿ ಅಡಿ ತೆರಿಗೆ ಅನುಕೂಲಗಳನ್ನು ಪಡೆಯುತ್ತೀರಿ. ಗೃಹ ಸಾಲ ಮರುಪಾವತಿ, ಎನ್'ಪಿಎಸ್, ಆರೋಗ್ಯ ವಿಮೆ, ಇತರೆ ರೀತಿಯಲ್ಲಿ ತೊಡಗಿಸಿಕೊಂಡಿದ್ದರೆ ಇತರ ವಿಭಾಗಗಳಲ್ಲಿ ತೆರಿಗೆ ವಿನಾಯಿತಿ ಪಡೆಯುತ್ತೀರಿ.

ಒಂದು ವೇಳೆ ನೀವು ವಿಭಾಗ 80C ಕಡಿತದ ಮಿತಿಗಳನ್ನು ಸಂಪೂರ್ಣವಾಗಿ ಬಳಸುತ್ತಿದ್ದರೆ, ನಿಮ್ಮ ಆದಾಯ ತೆರಿಗೆ ಪಾವತಿಯಿಂದ 1.5 ಲಕ್ಷ ರೂ.ಗಳನ್ನು ಕಡಿತಗೊಳಿಸಲಾಗುತ್ತದೆ ಹಾಗೂ ಉಳಿದ ತೆರಿಗೆಯನ್ನು ಪಾವತಿಸಬಹುದು. ಹಿಂದಿನ ಉದಾಹರಣೆಗೆ, ನಿಮ್ಮ ತೆರಿಗೆಯ ಆದಾಯವು 10.5 ಲಕ್ಷ ರೂ.ಗಳಿಗೆ ಕೆಳಗಿದ್ದರೆ ನಿಮ್ಮ ತೆರಿಗೆ ಹೊಣೆಗಾರಿಕೆ 1.4 ಲಕ್ಷ ರೂ.ಗೆ ಕಡಿಮೆಯಾಗುತ್ತದೆ.(2.5 ಲಕ್ಷರೂ. 10%+ 5 ಲಕ್ಷಕ್ಕೆ 20%+50.000ಕ್ಕೆ 30%) ಸೆಸ್ ಸೇರಿ.

ವಿನಾಯಿತಿ ಪಡೆಯಲು ಆದಾಯತೆರಿಗೆ ರಿಟರ್ನ್ಸ್'ಲ್ಲಿ ಸಲ್ಲಿಸಬೇಕಾದ ದಾಖಲೆಗಳು

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾದರೆ ನೀವು ಕಡ್ಡಾಯವಾಗಿ ಶಾಶ್ವತ ಖಾತೆ ಸಂಖ್ಯೆ(ಪಾನ್) ಹೊಂದಿರಬೇಕು.ಅದೇ ಸಮಯದಲ್ಲಿ,ನೀವು ಅಧಿಕೃತ ವಿಳಾಸ ಹಾಗೂ ಗುರುತಿನ ಪುರಾವೆ ಒದಗಿಸಬೇಕು. ನಿಮ್ಮ ಪಾನ್ ಕಾರ್ಡ್ ಗುರುತಿನ ಪುರಾವೆಯನ್ನು ಒದಗಿಸಬೇಕು. ನೀವು ಮರುಪಾವತಿ ಪಡೆದರೂ ಅಥವಾ ಪಡೆಯದಿದ್ದರೂ ಸಹ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಒದಗಿಸಬೇಕು. ತೆರಿಗೆ ರಿಟರ್ನ್ಸ್ ಪಾವತಿಗಾಗಿ ಜುಲೈ 1, 2017 ರಿಂದ ಆಧಾರ್ ಕಾರ್ಡ್'ನೊಂದಿಗೆ ಪಾನ್'ಕಾರ್ಡ್ ಸೇರಿರುವುದನ್ನು ಸರ್ಕಾರ ಇತ್ತೀಚಿಗೆ ಕಡ್ಡಾಯಗೊಳಿಸಿದೆ.

ಈ ದಾಖಲೆಗಳ ಹೊರತಾಗಿ, ವೇತನದಾರ ವ್ಯಕ್ತಿಗಳು ಫಾರ್ಮ್ 16ನ್ನು ಒದಗಿಸಬೇಕು. ಫಾರ್ಮ್ 16 ನಿಮ್ಮ ಟಿಡಿಎಸ್ ಪ್ರಮಾಣಪತ್ರವಾಗಿದ್ದು ಅದು ನಿಮ್ಮ ಆದಾಯದಿಂದ ಎಷ್ಟು ತೆರಿಗೆ ಕಡಿತಗೊಳಿಸುತ್ತದೆ ಎಂಬುದಕ್ಕೆ ಪುರಾವೆಯಾಗಿದೆ.

80ಸಿ ರೀತಿಯ ಯಾವುದೇ ತೆರಿಗೆ ಕಡಿತ ವಿನಾಯಿತಿ ಪಡೆದುಕೊಳ್ಳಬೇಕಾದರೆ, ನೀವು ಹೂಡಿಕೆಗೆ ಮಾಡಿರುವ ದಾಖಲೆಗಳನ್ನು ಒದಗಿಸಬೇಕು.

ನೀವು ಗೃಹ ಸಾಲ ಮರುಪಾವತಿ ಯೋಜನೆಯಡಿ ತೆರಿಗೆ ವಿನಾಯಿತಿ ಪಡೆಯಬೇಕಾದರೆ ಬಾಡಿಗೆದಾರ ಅಥವಾ ಬ್ಯಾಂಕ್ ಹಾಗೂ ಮಾಲೀಕರ ವಿವರವಿರುವ ಮನೆಯ ಗುರುತು ವಿಳಾಸವನ್ನು ಒದಗಿಸಬೇಕು.

ನೀವು ಸ್ಥಿರ ಠೇವಣಿಗಳು, ಚಿನ್ನ, ಆಸ್ತಿ, ಮ್ಯೂಚುವೆಲ್ ಫಂಡ್'ಗಳಲ್ಲಿ ಅಥವಾ ಷೇರುಗಳು ಹೂಡಿಕೆ ಮಾಡಿದ್ದು ಅದರಿಂದ ಲಾಭ ಪಡೆಯುತ್ತಿದ್ದರೆ ನಿಮ್ಮ ತೆರಿಗೆ ಡಿಕ್ಲರೇಷನ್'ನಲ್ಲಿ ನಮೂದಿಸಬೇಕು. ಇದು ದೀರ್ಘಕಾಲದ ಮತ್ತು ಅಲ್ಪಾವಧಿಯ ಬಂಡವಾಳ ಲಾಭಗಳ ಮೇಲೆ ತೆರಿಗೆ ದರ ತಿಳಿಯಲು ಮುಖ್ಯವಾಗಿರುತ್ತದೆ. ಇವೆರಡೂ ವಿಭಿನ್ನ ರೀತಿಯ ದರಗಳನ್ನು ಹೊಂದಿವೆ. ಇದಲ್ಲದೆ, ಅಲ್ಪಾವಧಿಯ ಹೊಂದಿರುವ ಷೇರುಗಳು, ಮ್ಯೂಚುಯಲ್ ಫಂಡ್ಗಳು, ಚಿನ್ನ ಮತ್ತು ರಿಯಲ್ ಎಸ್ಟೇಟ್ಗೆ ಬದಲಾಗುತ್ತದೆ. ಈ ವಿವರಗಳು ಸರಿಯಾದ ರಿಟರ್ನ್ಸ್ ಪಾವತಿಸಲು ಸಹಾಯ ಮಾಡುತ್ತವೆ ಹಾಗೂ ಭವಿಷ್ಯದಲ್ಲಿ ಯಾವುದೇ ತೊಂದರೆಯಾಗದಂತೆ ತಡೆಯುತ್ತವೆ.

ಅಂತಿಮವಾಗಿ, ಬಹುವಿಧದ ಆದಾಯದ ಮೂಲಗಳನ್ನು ಹೊಂದಿದ್ದರೆ ಸಹಾಯವನ್ನು ಪಡೆದುಕೊಳ್ಳಿ

ನಿಮ್ಮ ಆದಾಯದ ಮೂಲಗಳ ಆಧಾರದ ಮೇಲೆ ತೆರಿಗೆ ರಿಟರ್ನ್ಸ್ ಸಲ್ಲಿಸುವಿಕೆಯು ಸಂಕೀರ್ಣ ಅಥವಾ ಸರಳವಾಗಿರುತ್ತದೆ. ಪ್ರತಿಯೊಂದು ಮೂಲವು ಆದಾಯ ತೆರಿಗೆ ಸಂಕೀರ್ಣತೆಗೆ ಸೇರಿಸುತ್ತದೆ. ಆದ್ದರಿಂದ,ನಿಯಮಿತ ಉದ್ಯೋಗದಿಂದ ನೀವು ಯಾವುದಾದರೂ ಇತರ ಆದಾಯ ಮೂಲವನ್ನು ಹೊಂದಿದ್ದರೆ ಅರ್ಹವಾದ ಚಾರ್ಟರ್ಡ್ ಅಕೌಂಟೆಂಟ್(CA) ಸಹಾಯ ಪಡೆಯುವುದು ಒಳ್ಳೆಯದು.

ಲೇಖಕರು : ಆದಿಲ್ ಶೆಟ್ಟಿ, ಸಿಇಒ, ಬ್ಯಾಂಕ್ ಬಜಾರ್.ಕಾಂ