ನೊಗ ಹೊತ್ತು ಗದ್ದೆ ಉಳುಮೆ ಮಾಡುವ ಹೆಣ್ಣು ಮಕ್ಕಳು.. ಏನಿದು ರೈತನ ಕತೆ?

Fighting poverty: UP girls pull plough at their field to please rain God
Highlights

ರೈತನ ಬಳಿ ಟ್ರಾಕ್ಟರ್ ನಿಂದ ಹೊಲ ಉಳುಮೆ ಮಾಡಿಸುವಷ್ಟು ಹಣ ಇಲ್ಲ.. ಇನ್ನು ಎತ್ತಿನ ಜೋಡಿ ಖರೀದಿ ಮಾಡುವ ಶಕ್ತಿಯೂ ಇಲ್ಲ. ಆದರೆ ಇರುವ  ತುಂಡು ಭೂಮಿಯಲ್ಲಿ ವ್ಯವಸಾಯ ಮಾಡಲೇ ಬೇಕಿದೆ. ಈ ರೈತನಿಗೆ ತಮ್ಮ ಇಬ್ಬರು ಹೆಣ್ಣು ಮಕ್ಕಳು ನೀಡುತ್ತಿರುವ ಬೆಂಬಲ ನಿಜಕ್ಕೂ ಕಣ್ಣಂಚಲ್ಲಿ ಒಂದು ಹನಿ ತರಿಸದರೆ ಇರದು. ಏನಿದು ರೈತನ ಕತೆ..ವ್ಯಥೆ..?

ಲಕ್ನೋ[ಜು. 2] ಹೊಲ ಊಳುವ ಅಪ್ಪನಿಗೆ ಈ ಇಬ್ಬರು ಹೆಣ್ಣು ಮಕ್ಕಳೆ ಎತ್ತುಗಳು. ವರುಣದೇವ ಮತ್ತು ಇಂದ್ರ ದೇವನಿಗೆ ಉತ್ತಮ ಮಳೆಗೆ ಪ್ರಾರ್ಥನೆ ಮಾಡಿ ಪ್ರತಿದಿನ ಅಪ್ಪನ ಜತೆ ಹೊಲಕ್ಕೆ ಊಳುತ್ತಾರೆ. ಹೆಗಲ ಮೇಲೆ ನೊಗ ಹೊತ್ತು ಹೆಜ್ಜೆ ಹಾಕುತ್ತಾರೆ. ಅಷ್ಟೆ ಅಲ್ಲ ಹೆಣ್ಣು ಮಕ್ಕಳು ಈ ರೀತಿ ನೊಗ ಹೊತ್ತು ಗದ್ದೆ ಉಳುಮೆ ಮಾಡಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯನ್ನು ಇರಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಝಾನ್ಸಿ ಮೌರಾನಿಪುರದ 60 ವರ್ಷದ ರೈತ ಚೈಲಾಲ್ ಆರ್ವಾರ್ ಪುತ್ರಿಯರಾದ ರವೀನಾ ಮತ್ತು ಶಿವಾನಿ ಪ್ರತಿದಿನ ತಮ್ಮ ಅಪ್ಪನಿಗೆ ಸಹಾಯ ಮಾಡುತ್ತಾರೆ. ಕಳೆದ ನಾಲ್ಕು ವರ್ಷದಿಂದ ಭಾಗದಲ್ಲಿ ಮಳೆ ಇಲ್ಲ. ಆದರೂ ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದು ಅಪ್ಪನ ನೆರವಿಗೆ ನಿಂತಿರುವ ಹೆಣ್ಣು ಮಕ್ಕಳಿಗೊಂದು ಸಲಾಂ.. ಈ ಬಾರಿ ಉತ್ತಮ ಮಳೆಯಾಗಿ ಭರ್ಜರಿ ಫಸಲು ನಡ ಕುಟುಂಬದ ಹೊಟ್ಟೆ ತುಂಬಿಸಲಿ.

ರಾಜ್ಯದ ಸಾಗರ ಮತ್ತು ಸೊರಬ ತಾಲೂಕಿನಲ್ಲಿಯೂ ಇಂಥದ್ದೇ ಪ್ರಕರಣ ಹಿಂದೆ ವರದಿಯಾಗಿತ್ತು. ಎತ್ತಿನ ಬದಲು ಹೆಂಡತಿ ಮತ್ತು ಪುತ್ರ ನೊಗ ಎಳೆದು ಗದ್ದೆ ಉಳುಮೆ ಮಾಡಿದ ಸುದ್ದಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.

loader