2 ಮಂಗಳಮುಖಿ ಗುಂಪುಗಳ ನಡುವೆ ಮಾರಾಮಾರಿ; ಜಡೆ ಜಗಳ ತಡೆಯಲು ಪೊಲೀಸರ ಹರಸಾಹಸ

First Published 3, Feb 2018, 3:16 PM IST
Fight Between two Transgenders Group in Chitradurga
Highlights

ಪೊಲೀಸ್ ಠಾಣೆ ಎದುರೇ ಮಂಗಳಮುಖಿಯರು ಜಡೆ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.  ಮಂಗಳಮುಖಿಯರ ಎರಡು ಬಣದ ನಡುವೆ ಮಾರಾಮಾರಿ ನಡೆದಿದೆ. ಗಲಾಟೆ ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಚಿತ್ರದುರ್ಗ (ಫೆ.03): ಪೊಲೀಸ್ ಠಾಣೆ ಎದುರೇ ಮಂಗಳಮುಖಿಯರು ಜಡೆ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.  ಮಂಗಳಮುಖಿಯರ ಎರಡು ಬಣದ ನಡುವೆ ಮಾರಾಮಾರಿ ನಡೆದಿದೆ. ಗಲಾಟೆ ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಒಂದು ಮಂಗಳಮುಖಿಯರ ಗುಂಪು ವ್ಯಾಪ್ತಿ ಮೀರಿ ವಸೂಲಿ ಮಾಡುತ್ತಿದ್ದಾರೆ ಎಂದು ಇನ್ನೊಂದು ಗುಂಪು ಆರೋಪ ಮಾಡಿದೆ. ಎರಡೂ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಬೆಂಗಳೂರು ಹಾಗೂ ಚಾಮರಾಜನಗರ ಮೂಲದ ಮಂಗಳಮುಖಿಯರ ತಂಡ ಚಿತ್ರದುರ್ಗಕ್ಕೆ ಲಗ್ಗೆ ಇಟ್ಟಿದೆ.  ಎರಡು ಮೂರು ಬಾರಿ  ಸ್ಥಳಿಯ ಮಂಗಳಮುಖಿಯರು ಎಚ್ಚರಿಕೆ ನೀಡಿದ್ರೂ ಅವರು ಲೆಕ್ಕಿಸುತ್ತಿಲ್ಲ.

 

loader