ಸೆನೆಗಲ್ ಗೆ ಸುಲಭ ತುತ್ತಾದ ಪೋಲಾಂಡ್

FIFA World Cup 2018: Senegal stun Poland 2-1
Highlights

  • ಪೋಲೆಂಡ್‌ನ ಥಿಯಾಗೋರಿಂದ 37ನೇ ನಿಮಿಷದಲ್ಲಿ ಸ್ವಂತ ಗೋಲು
  • 60ನೇ ನಿಮಿಷದಲ್ಲಿ ಬೇಯೆ ನಿಯಾಂಗ್ ತಂಡದ ಪರ 2ನೇ ಗೋಲು 

ಮಾಸ್ಕೋ[ಜೂ.20]: 2018ರ ಫಿಫಾ ವಿಶ್ವಕಪ್ ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ವಿಶ್ವ ನಂ.8 ಪೋಲೆಂಡ್, ಸೆನೆಗಲ್ ವಿರುದ್ಧ 0-2 ಗೋಲುಗಳ ಸೋಲುಂಡು ನಿರಾಸೆ ಅನುಭವಿಸಿದೆ.

ಇಲ್ಲಿ ನಡೆದ ‘ಎಚ್’ ಗುಂಪಿನ ಪಂದ್ಯದಲ್ಲಿ ಪೋಲೆಂಡ್‌ನ ಥಿಯಾಗೋ 37ನೇ ನಿಮಿಷದಲ್ಲಿ ಸ್ವಂತ ಗೋಲು ಬಾರಿಸಿ ಸೆನೆಗಲ್‌ಗೆ 1-0 ಮುನ್ನಡೆ ಒದಗಿಸಿದರು. ಬಳಿಕ 60ನೇ ನಿಮಿಷದಲ್ಲಿ ಬೇಯೆ ನಿಯಾಂಗ್ ತಂಡದ ಪರ 2ನೇ ಗೋಲು ಗಳಿಸಿದರು.

ಈ ಪಂದ್ಯದ ಮುಕ್ತಾಯದೊಂದಿಗೆ ಎಲ್ಲಾ 32 ತಂಡಗಳು ತಲಾ ಒಂದು ಪಂದ್ಯವನ್ನು ಪೂರ್ಣಗೊಳಿಸಿವೆ. ಬಲಿಷ್ಠ ತಂಡಗಳು ಹಿನ್ನಡೆ ಅನುಭವಿಸಿರುವುದರಿಂದ ನಾಕೌಟ್ ಲೆಕ್ಕಾಚಾರ ಕುತೂಹಲ ಕೆರಳಿಸಿದೆ.

loader