ಪರೀಕ್ಷೆ ಉತ್ತಮವಾಗಿ ಮಾಡದಿರುವುದಕ್ಕೆ ವಿದ್ಯಾರ್ಥಿ ಕೊಟ್ಟ ಕಾರಣವೇನು..?

First Published 1, Apr 2018, 12:22 PM IST
Fell in love couldnt Study writes UP Board Student
Highlights

ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿ ವಿವಿಧ  ರೀತಿಯಾಗಿ ಬರೆಯುವುದನ್ನು ಕೇಳಿದ್ದೇವೆ. ದಯವಿಟ್ಟು ಪಾಸ್ ಮಾಡಿ ಎನ್ನುವುದು, ಹಣವನ್ನು ಇರಿಸುವುದನ್ನು ಕೇಳಿದ್ದೇವೆ.

ಮುಜಾಫರಾನಗರ್ : ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿ ವಿವಿಧ  ರೀತಿಯಾಗಿ ಬರೆಯುವುದನ್ನು ಕೇಳಿದ್ದೇವೆ. ದಯವಿಟ್ಟು ಪಾಸ್ ಮಾಡಿ ಎನ್ನುವುದು, ಹಣವನ್ನು ಇರಿಸುವುದನ್ನು ಕೇಳಿದ್ದೇವೆ.

ಆದರೆ ಇಲ್ಲೊಂದು ಪ್ರಕರಣ ಸಂಪೂರ್ಣ ವಿಭಿನ್ನವಾಗಿದೆ.  ಉತ್ತರ ಪ್ರದೇಶದ  ಬೋರ್ಡ್  ಪರೀಕ್ಷೆಯಲ್ಲಿ ವಿದ್ಯಾರ್ಥಿಯೋರ್ವ ತಾನು ಲವ್ವಲ್ಲಿ ಬಿದ್ದ ಕಾರಣಕ್ಕೆ ಪರೀಕ್ಷೆಯನ್ನು ಉತ್ತಮವಾಗಿ ಮಾಡಲು ಆಗಲಿಲ್ಲ ಎಂದು ಬರೆದಿದ್ದಾನೆ.

ಈ ಪ್ರೀತಿ ಎನ್ನುವುದು ಹೀಗೆ ಸಾಯಲು - ಬದುಕಲು ಬಿಡುವುದಿಲ್ಲ. ಲವ್ವಲ್ಲಿ ಬಿದ್ದ ಕಾರಣದಿಂದ ನಾನು ಓದಲು ಆಗಲಿಲ್ಲ. ಆದ್ದರಿಂದ ಪರೀಕ್ಷೆಯನ್ನು ಉತ್ತಮವಾಗಿ ಮಾಡಿಲ್ಲ ಎಂದು ಬರೆದಿದ್ದಾರೆ.

ಅಲ್ಲದೇ ಪ್ರಶ್ನೆ ಪತ್ರಿಕೆಯಲ್ಲಿ ಐ ಲವ್ ಮೈ ಪೂಜಾ ಎಂದೂ ಕೂಡ ಬರೆದಿದ್ದಾರೆ. ಹೃದಯದ ಚಿತ್ರವನ್ನು ಬಿಡಿಸಿ ಅದರಲ್ಲಿ ಪೂಜಾ ಎಂದು ವಿದ್ಯಾರ್ಥಿ ಬರೆದಿದ್ದಾರೆ.

loader