ಹಸುಗೂಸಿಗೆ ಎದೆಹಾಲಿಗಿಂತ ಉತ್ತಮ ಆಹಾರ ಇಲ್ಲವೆಂಬುದು ವೈದ್ಯಲೋಕವೇ ಒಪ್ಪಿಕೊಂಡಿರುವ ವಾಸ್ತವ.

ಆದರೆ, 4-6 ತಿಂಗಳ ಮಕ್ಕಳಿಗೆ ಮೊಟ್ಟೆಮತ್ತು ಕಡಲೆಕಾಯಿಯನ್ನು ಆಹಾರವನ್ನಾಗಿ ನೀಡುವುದರಿಂದ ಮಕ್ಕಳಲ್ಲಿ ಅಲರ್ಜಿ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

146 ಅಧ್ಯಯನ ವರದಿಗಳನ್ನು ಆಧರಿಸಿ ಸಂಶೋಧನೆ ಮಾಡಿದ ಲಂಡನ್ಇಂಪೀರಿಯಲ್ಕಾಲೇಜಿನ ವಿಜ್ಞಾನಿಗಳು ಬಗ್ಗೆ ಕಂಡುಕೊಂಡಿದ್ದಾರೆ. ಸಂಶೋಧನೆಯಲ್ಲಿ ಸುಮಾರು 2ಲಕ್ಷ ಮಕ್ಕಳು ಭಾಗಿಯಾಗಿದ್ದರು.