Asianet Suvarna News Asianet Suvarna News

ದೇವರ ಪೂಜೆಗೆ ಅಗರಬತ್ತಿ ಏಕೆ ಉರಿಸಬೇಕು?

ಧೂಪ ಅಥವಾ ಗಂಧದಕಡ್ಡಿಯ ಹೊಗೆಯ ಮೂಲಕ ನಮ್ಮ ಪ್ರಾರ್ಥನೆ ದೇವರನ್ನು ತಲುಪುತ್ತದೆ ಎಂಬ ನಂಬಿಕೆಯಿದೆ. ಅದರ ಪರಿಮಳವು ದೇವರನ್ನು ನಾವಿರುವ ಜಾಗಕ್ಕೆ ಸೆಳೆಯುತ್ತದೆ ಎಂಬುದು ಇನ್ನೊಂದು ನಂಬಿಕೆ. ಪೂಜೆಯ ಸ್ಥಳದಲ್ಲಿರುವ ಕೆಟ್ಟ ವಾಸನೆಗಳನ್ನು ಪರಿಹರಿಸಿ ಒಳ್ಳೆಯ ಪರಿಮಳ ಹರಡುವ ಮೂಲಕ ಪೂಜೆ ಮಾಡುವವರ ಮನಸ್ಸು ಪ್ರಸನ್ನವಾಗಿರುವಂತೆ ನೋಡಿಕೊಳ್ಳುತ್ತದೆ ಎಂಬುದು ಗಂಧದಕಡ್ಡಿ ಅಥವಾ ಧೂಪ ಉರಿಸಲು ಇರುವ ಪ್ರಮುಖ ಕಾರಣ.

Features of Agarabatti

ಪೂಜೆ, ಪುಣ್ಯಕಾರ್ಯ, ಕೊನೆಗೆ ಶವಸಂಸ್ಕಾರದಲ್ಲೂ ಹಿಂದುಗಳು ಗಂಧದಕಡ್ಡಿಯನ್ನು ವ್ಯಾಪಕವಾಗಿ ಬಳಸುತ್ತಾರೆ. ಅಗರಬತ್ತಿ ಹಚ್ಚದೆ ಯಾವ ಪೂಜೆಯೂ ಮುಗಿಯುವುದಿಲ್ಲ. ಒಂದು ವೇಳೆ ಶಾಸೋಕ್ತವಾಗಿ ಪೂಜೆ ಮಾಡಲು ಸಾಧ್ಯವಾಗದೆ ಇದ್ದರೆ ಬೆಳಿಗ್ಗೆ, ಸಂಜೆ ದೇವರ ಫೋಟೋಕ್ಕೆ ಕೈಮುಗಿಯುವಾಗಲಾದರೂ ಗಂಧದಕಡ್ಡಿ ಹಚ್ಚುತ್ತಾರೆ. ಷೋಡಶೋಪಚಾರ ಪೂಜೆ ಎಂದು ಕರೆಯಲಾಗುವ 16 ವಿಧದ ಪೂಜೆಯಲ್ಲಿ ಧೂಪದಾರತಿಯೂ ಒಂದು. ಏಕೆ ಇದಕ್ಕೆ ಇಷ್ಟು ಮಹತ್ವ?

ಧೂಪ ಅಥವಾ ಗಂಧದಕಡ್ಡಿಯ ಹೊಗೆಯ ಮೂಲಕ ನಮ್ಮ ಪ್ರಾರ್ಥನೆ ದೇವರನ್ನು ತಲುಪುತ್ತದೆ ಎಂಬ ನಂಬಿಕೆಯಿದೆ. ಅದರ ಪರಿಮಳವು ದೇವರನ್ನು ನಾವಿರುವ ಜಾಗಕ್ಕೆ ಸೆಳೆಯುತ್ತದೆ ಎಂಬುದು ಇನ್ನೊಂದು ನಂಬಿಕೆ. ಪೂಜೆಯ ಸ್ಥಳದಲ್ಲಿರುವ ಕೆಟ್ಟ ವಾಸನೆಗಳನ್ನು ಪರಿಹರಿಸಿ ಒಳ್ಳೆಯ ಪರಿಮಳ ಹರಡುವ ಮೂಲಕ ಪೂಜೆ ಮಾಡುವವರ ಮನಸ್ಸು ಪ್ರಸನ್ನವಾಗಿರುವಂತೆ ನೋಡಿಕೊಳ್ಳುತ್ತದೆ ಎಂಬುದು ಗಂಧದಕಡ್ಡಿ ಅಥವಾ ಧೂಪ ಉರಿಸಲು ಇರುವ ಪ್ರಮುಖ ಕಾರಣ. ಆಧುನಿಕ ವೈದ್ಯ ಪದ್ಧತಿಯಲ್ಲಿ ಅರೋಮಾಥೆರಪಿ ಎಂಬೊಂದು ವಿಧಾನವಿದೆ. ಒಳ್ಳೆಯ ಪರಿಮಳದ ಮೂಲಕ ಕೆಲ ಅನಾರೋಗ್ಯದ ಸಮಸ್ಯೆಗೆ ಚಿಕಿತ್ಸೆ ನೀಡುವ ಪದ್ಧತಿಯದು. ಅಲ್ಲಿ ಗಂಧದಕಡ್ಡಿ ಹಾಗೂ ಧೂಪವನ್ನೂ ಬಳಸಲಾಗುತ್ತದೆ. ಸುವಾಸನೆಗೆ ನಮ್ಮ ಮನಸ್ಸಿನ ಒತ್ತಡಗಳನ್ನೂ, ಕೆಟ್ಟ ಯೋಚನೆಗಳನ್ನೂ ದೂರಮಾಡುವ ಶಕ್ತಿಯಿದೆ. ಇಂತಹದ್ದೊಂದು ನಿರ್ಮಲ ಮನಸ್ಸು ಪೂಜೆಗೆ ಅಗತ್ಯ. ಗೋಮಯ, ಹೂವು, ಗಂಧ, ಗಿಡಮೂಲಿಕೆಗಳಿಂದ ತಯಾರಿಸಲ್ಪಡುವ ಒಳ್ಳೆಯ ಗುಣಮಟ್ಟದ ಅಗರಬತ್ತಿಯ ಹೊಗೆ ನಮ್ಮ ಮನಸ್ಸಿಗೂ, ಆರೋಗ್ಯಕ್ಕೂ, ಪೂಜಾಸ್ಥಳದಲ್ಲಿರುವ ಕ್ರಿಮಿ-ಕೀಟಗಳನ್ನು ದೂರ ಓಡಿಸುವುದಕ್ಕೂ ಒಳ್ಳೆಯದು. ಧ್ಯಾನಕ್ಕೆ ಮನಸ್ಸನ್ನು ಸಿದ್ಧಗೊಳಿಸುವ, ನಾವು ಕುಳಿತುಕೊಳ್ಳುವ ಸ್ಥಳದಲ್ಲಿ ಪೂಜೆಯ ವಾತಾವರಣವನ್ನು ನಿರ್ಮಿಸುವ ಹಾಗೂ ಮನಸ್ಸನ್ನು ಏಕಾಗ್ರಗೊಳಿಸುವ ಶಕ್ತಿ ಗಂಧದಕಡ್ಡಿಯ ಪರಿಮಳಕ್ಕಿದೆ. ಹಾಗಾಗಿ ಹತ್ತಾರು ಉದ್ದೇಶಗಳನ್ನಿಟ್ಟುಕೊಂಡು ಇದನ್ನು ಉರಿಸುವ ಪದ್ಧತಿ ಬೆಳೆದುಬಂದಿದೆ.

ವಿವಾಹಿತ ಸೀ ಕಾಲುಂಗುರ ಏಕೆ ಧರಿಸಬೇಕು?

ಮದುವೆಯಾದ ಮಹಿಳೆಯರು ಕಾಲುಂಗುರ ಧರಿಸುವುದು ಹಿಂದು ಹಾಗೂ ಮುಸ್ಲಿಂ ಸಂಪ್ರದಾಯದಲ್ಲಿ ಕಡ್ಡಾಯ ಎಂಬಷ್ಟು ಪ್ರಚಲಿತದಲ್ಲಿರುವ ಸಂಪ್ರದಾಯ. ಹೆಣ್ಣಿಗೆ ಹೇಳಿರುವ 16 ಬಗೆಯ ಶೃಂಗಾರಗಳಲ್ಲಿ ಕಾಲುಂಗುರ ಕೂಡ ಒಂದು. ಎರಡೂ ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸಲಾಗುತ್ತದೆ. ಮದುವೆಯ ಹಲವು ಶಾಸಗಳಲ್ಲಿ ಗಂಡನು ಹೆಂಡತಿಗೆ ಕಾಲುಂಗುರ ತೊಡಿಸುವುದು ಪ್ರಮುಖವಾದುದು. ಇದು ಹೆಣ್ಣಿಗೆ ಮದುವೆಯಾಗಿದೆ ಎಂದು ಸಮಾಜ ಗುರುತಿಸಲು ಇರುವ ಪ್ರಮುಖ ಸಂಕೇತ ಕೂಡ. ಆ ಮೂಲಕ ಮದುವೆಯಾದ ಹೆಣ್ಣಿಗೆ ಸಹಜವಾಗಿ ಸಿಗುವ ಸಾಮಾಜಿಕ ಭದ್ರತೆ ಇದರಿಂದ ಸಿಗುತ್ತದೆ.

ಸಂಪ್ರದಾಯ ಹಾಗೂ ಸಾಮಾಜಿಕ ಮಹತ್ವಕ್ಕಿಂತ ಹೆಚ್ಚಾಗಿ ಕಾಲುಂಗುರದಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಲಾಭಗಳು ಹಲವಾರಿವೆ. ಅವುಗಳ ಹಿನ್ನೆಲೆಯಲ್ಲೇ ಬೆಳ್ಳಿಯ ಕಾಲುಂಗುರ ಧರಿಸುವ ಪದ್ಧತಿ ರೂಢಿಗೆ ಬಂದಿದೆ. ಆಯುರ್ವೇದದಲ್ಲಿ ಇದನ್ನು ಚೆನ್ನಾಗಿ ಹೇಳಲಾಗಿದೆ. ಕಾಲಿನ ಎರಡನೇ ಬೆರಳಿನಿಂದ ಒಂದು ಪ್ರಮುಖ ನರವು ಗರ್ಭಕೋಶದ ಮೂಲಕ ಮೆದುಳಿಗೆ ಕನೆಕ್ಟ್ ಆಗಿರುತ್ತದೆ. ಕಾಲುಂಗುರವು ಆಕ್ಯುಪ್ರೆಶರ್ ರೀತಿ ಕೆಲಸ ಮಾಡುವುದರಿಂದ ರಕ್ತದ ಚಲನೆಯನ್ನು ಸುಗಮಗೊಳಿಸಿ ಗರ್ಭಕೋಶವನ್ನು ಆರೋಗ್ಯವಾಗಿರಿಸುತ್ತದೆ. ಹಾಗೆಯೇ, ಅದು ಋತುಚಕ್ರವನ್ನು ನಿಯಮಿತಗೊಳಿಸುವ ಮೂಲಕ ಸಂತಾನಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಬೆಳ್ಳಿಯು ಉತ್ತಮ ಕಂಡಕ್ಟರ್. ಅದು ಭೂಮಿಯಲ್ಲಿರುವ ಧ್ರುವೀಯ ಶಕ್ತಿಗಳನ್ನು ಮಹಿಳೆಯ ದೇಹಕ್ಕೆ ದಾಟಿಸುತ್ತದೆ. ಅದರಿಂದಾಗಿ ಮಹಿಳೆಯ ದೇಹ ಚೈತನ್ಯಶೀಲವಾಗಿರುತ್ತದೆ. ಹಾಗಾಗಿ ಕಾಲುಂಗುರ ಕೇವಲ ಅಲಂಕಾರದ ಆಭರಣವಷ್ಟೇ ಅಲ್ಲ, ಅದು ಗೃಹಿಣಿಯ ಆರೋಗ್ಯವನ್ನು ವೃದ್ಧಿಸುವ, ಆಕೆಯ ಸಾಮಾಜಿಕ ಸ್ಥಾನಮಾನವನ್ನು ಗುರುತಿಸುವ, ಋತುಚಕ್ರವನ್ನು ನಿಯಮಿತಗೊಳಿಸುವ ಹಾಗೂ ರಕ್ತದ ಪರಿಚಲನೆಯನ್ನು ಸುಗಮಗೊಳಿಸುವ ಪ್ರಮುಖ ಸಾಧನ ಕೂಡ ಹೌದು.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios