ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಅವರ ಸಹಿಯನ್ನು ಫೋರ್ಜರಿ ಮಾಡುವ ಸಾಧ್ಯತೆ ಇದೆ ಎಂದು ಎಐಎಡಿಎಂಕೆ ಉಚ್ಚಾಟಿತ ರಾಜ್ಯಸಭೆ ಸದಸ್ಯೆ ಶಸಿಕಲಾ ಪುಷ್ಪಾ ರಾಜ್ಯ.ಪಾಲರಿಗೆ ಪತ್ರ ಬರೆದಿದ್ದಾರೆ. ಜಯ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಪಕ್ಷದ ವರಿಷ್ಠರ ಸಹಿಯನ್ನು ನಕಲಿ ಮಾಡು ಸಾಧ್ಯತೆಯಿದೆ ಎಂದು ಗವರ್ನರ್ ಸಿ. ವಿದ್ಯಾಸಾಗರ್ ಅವರಿಗೆ ಪತ್ರ ಬರೆದಿದ್ದಾರೆ.

ಚೆನ್ನೈ(ಅ.11): ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಅವರ ಸಹಿಯನ್ನು ಫೋರ್ಜರಿ ಮಾಡುವ ಸಾಧ್ಯತೆ ಇದೆ ಎಂದು ಎಐಎಡಿಎಂಕೆ ಉಚ್ಚಾಟಿತ ರಾಜ್ಯಸಭೆ ಸದಸ್ಯೆ ಶಸಿಕಲಾ ಪುಷ್ಪಾ ರಾಜ್ಯ.ಪಾಲರಿಗೆ ಪತ್ರ ಬರೆದಿದ್ದಾರೆ.

ಜಯ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಪಕ್ಷದ ವರಿಷ್ಠರ ಸಹಿಯನ್ನು ನಕಲಿ ಮಾಡು ಸಾಧ್ಯತೆಯಿದೆ ಎಂದು ಗವರ್ನರ್ ಸಿ. ವಿದ್ಯಾಸಾಗರ್ ಅವರಿಗೆ ಪತ್ರ ಬರೆದಿದ್ದಾರೆ.

ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಪ್ರಧಾನ ಉಪ ಕಾರ್ಯದರ್ಶಿ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಮುಂದುವರಿಸುವಂತೆ ನಾಮ ನಿರ್ದೇಶನ ಮಾಡಲು ಮುಖ್ಯಮಂತ್ರಿ ಸುತ್ತ ಇರುವ ಕೆಲವು ವ್ಯಕ್ತಿಗಳು ಸಿಎಂ ಅವರ ಸಹಿಯನ್ನು ನಕಲು ಮಾಡುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದ್ದಾರೆ.