ಹೆಣ್ಣು ಮಕ್ಕಳು ಬಿಯರ್ ಕುಡಿಯಲು ಆರಂಭಿಸಿರುವುದು ಆತಂಕ ತಂದಿದೆ : ಪರಿಕ್ಕರ್

First Published 10, Feb 2018, 12:02 PM IST
Fear as even Girls have started drinking beer Says  Manohar Parrikar
Highlights

ಹೆಣ್ಣು ಮಕ್ಕಳು ಬಿಯರ್ ಕುಡಿಯಲು ಆರಂಭಿಸಿರುವುದು ನಿಜಕ್ಕೂ ತಮಗೆ ಆತಂಕವನ್ನು ಉಂಟು ಮಾಡಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ರಾಜ್ಯದಲ್ಲಿ ಆಯೋಜಿಸಿದ್ದ ಯುವ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ರೀತಿಯಾದ ಹೇಳಿಕೆ ನೀಡಿದ್ದಾರೆ.

ಪಣಜಿ : ಹೆಣ್ಣು ಮಕ್ಕಳು ಬಿಯರ್ ಕುಡಿಯಲು ಆರಂಭಿಸಿರುವುದು ನಿಜಕ್ಕೂ ತಮಗೆ ಆತಂಕವನ್ನು ಉಂಟು ಮಾಡಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ರಾಜ್ಯದಲ್ಲಿ ಆಯೋಜಿಸಿದ್ದ ಯುವ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ರೀತಿಯಾದ ಹೇಳಿಕೆ ನೀಡಿದ್ದಾರೆ.

ಅಲ್ಲದೇ ಬಳಿಕ ಇದನ್ನೂ ತಾವು ಎಲ್ಲರಿಗೂ ಹೇಳುತ್ತಿಲ್ಲ ಎಂದೂ ಕೂಡ ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.  ಇನ್ನು ಶಿಕ್ಷಣ ಸಂಸ್ಥೆಗಳಲ್ಲಿಯೂ ಕೂಡ ಮಾದಕ ವಸ್ತುಗಳ ಸೇವನೆಯು ನಡೆಯುತ್ತದೆ. ಗೋವಾದಲ್ಲಿಯೂ ಕೂಡ ಡ್ರಗ್  ನೆಟ್ವರ್ಕ್ ಬೆಳೆಯುತ್ತಿತ್ತು.

ಆದರೆ ಮಾದಕ ವಸ್ತುಗಳ ವಿರುದ್ಧ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ.  ರಾಜ್ಯದಲ್ಲಿ ಡ್ರಗ್ ವಿಚಾರವಾಗಿ ಅತ್ಯಂತ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಪೊಲೀಸರಿಗೂ ಅವರು ಸೂಚನೆ ನೀಡಿದ್ದಾಗಿ ಹೇಳಿದ್ದಾರೆ.

 

loader