ಅರ್ಜುನ್‌ ರಾಣಾ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ, ‘ ಛತ್ತೀಸ್‌ಗಢದಲ್ಲಿ ಬಿಜೆಪಿ ಪರವಾಗಿ ಇವಿಎಂನಲ್ಲಿ ಮತಚಲಾವಣೆಯಾಗುತ್ತಿದೆ’ ಎಂದು ಹೇಳಿದ್ದಾರೆ. ಅವರ ಈ ಪೋಸ್ಟ್‌ ಸಾವಿರಕ್ಕೂ ಅಧಿಕಬಾರಿ ಶೇರ್‌ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಾನು ಆನೆ ಚಿಹ್ನೆಗೆ ಮತ ಹಾಕುತ್ತಿದ್ದರೂ ಬಿಜೆಪಿಗೆ ಮತ ಹೋಗುತ್ತಿದೆ ಎಂದು ಆರೋಪ ಮಾಡುತ್ತಿರುವ ದೃಶ್ಯವಿದೆ.

ಛತ್ತೀಸ್‌ಗಢದಲ್ಲಿ ದೋಷಪೂರಿತ ಇಲೆಕ್ಟ್ರಾನಿಕ್‌ ಓಟಿಂಗ್‌ ಮಷಿನ್‌ (ಇವಿಎಂ) ಪತ್ತೆಯಾಗಿದೆ. ವಿದ್ಯುನ್ಮಾನ ಮತಯಂತ್ರದ ಯಾವುದೇ ಬಟನ್‌ ಒತ್ತಿದರೂ ಭಾರತೀಯ ಜನತಾ ಪಾರ್ಟಿಗೆ ಮತಗಳು ಚಲಾವಣೆಯಾಗುತ್ತಿದೆ ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅರ್ಜುನ್‌ ರಾಣಾ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ, ‘ ಛತ್ತೀಸ್‌ಗಢದಲ್ಲಿ ಬಿಜೆಪಿ ಪರವಾಗಿ ಇವಿಎಂನಲ್ಲಿ ಮತಚಲಾವಣೆಯಾಗುತ್ತಿದೆ’ ಎಂದು ಹೇಳಿದ್ದಾರೆ. ಅವರ ಈ ಪೋಸ್ಟ್‌ ಸಾವಿರಕ್ಕೂ ಅಧಿಕಬಾರಿ ಶೇರ್‌ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಾನು ಆನೆ ಚಿಹ್ನೆಗೆ ಮತ ಹಾಕುತ್ತಿದ್ದರೂ ಬಿಜೆಪಿಗೆ ಮತ ಹೋಗುತ್ತಿದೆ ಎಂದು ಆರೋಪ ಮಾಡುತ್ತಿರುವ ದೃಶ್ಯವಿದೆ.

ಆದರೆ ನಿಜಕ್ಕೂ ಛತ್ತೀಸ್‌ಗಢ ಇಲೆಕ್ಟ್ರಾನಿಕ್‌ ಮತಯಂತ್ರದಲ್ಲಿ ದೋಷವಿರುವುದು ಪತ್ತೆಯಾಗಿತ್ತೇ ಎಂದು ಪರಿಶೀಲಿಸಿದಾಗ ಇದು ಹಳೆಯ ವಿಡಿಯೋ ಎಂಬುದು ದೃಢವಾಗಿದೆ. ವಾಸ್ತವಾಗಿ ಛತ್ತೀಸ್‌ಗಢದ ಇವಿಎಂ ಯಂತ್ರಗಳಲ್ಲಿ ದೋಷವಿದೆ ಎಂದು ಹರಿದಾಡುತ್ತಿರುವ ವಿಡಿಯೋ ಉತ್ತರ ಪ್ರದೇಶದ್ದು. 2017ರಲ್ಲಿ ಉತ್ತರ ಪ್ರದೇಶದ ಸ್ಥಳೀಯ ಚುನಾವಣೆ ವೇಳೆ ಈ ರೀತಿಯ ಆರೋಪ ಮಾಡಲಾಗಿತ್ತು. ಆಗ ಅಲ್ಲಿನ ರಾಜ್ಯ ಚುನಾವಣಾ ಆಯೋಗ ಆರೋಪವನ್ನು ಅಲ್ಲಗಳೆದಿತ್ತು. ಛತ್ತೀಸ್‌ಗಢದಲ್ಲಿ ನವೆಂಬರ್‌ 12ರಂದು ಮೊದಲನೇ ಹಂತದ ವಿಧಾನಸಭಾ ಚುನಾವಣೆ ನಡೆದಿದ್ದು, ಇದೇ ನವೆಂಬರ್‌ 20ಕ್ಕೆ ಎರಡನೇ ಹಂತದ ಚುನಾವಣೆ ನಡೆಯಲಿದೆ. ಡಿಸೆಂಬರ್‌ 11ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.