ಈರಣ್ಣ ನಿನ್ನೆ ಕರ್ತವ್ಯದಿಂದ ಮನೆಗೆ ಬಂದಿದ್ದ. ಈ ವೇಳೆ ಹಣದ ವಿಚಾರಕ್ಕಾಗಿ ತಂದೆ ಮಗನ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ತಂದೆ ವಿಠಲ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಆಗ ಯೋಧ ಈರಣ್ಣ ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಅನುಸೂಯಾ (೪೦) ಸಹೋದರಿ ಪ್ರೀತಿ (೧೯) ಗಂಭೀರವಾಗಿ ಗಾಯಗೊಂಡಿದ್ದಾರೆ.  

ಬೆಳಗಾವಿ(ಡಿ.13): ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ತಂದೆಯೇ ಮಗನ ಮೇಲೆ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ವೃತ್ತಿಯಲ್ಲಿ ಯೋಧನಾಗಿರುವ ಮಗನ ಮೇಲೆಯೇ ತಂದೆ ಫೈರಿಂಗ್‌ ಮಾಡಿದ್ದಾನೆ.

ಈರಣ್ಣ ವಿಠಲ ಇಂಡಿ (೨೧) ಎಂಬವರೇ ತಂದೆಯ ಗುಂಡಿಗೆ ಬಲಿಯಾಗಿರುವ ಯೋಧ. ಮೃತಪಟ್ಟ ಯೋಧ ಬೆಂಗಳೂರಿನ ಎಂಇಸಿ ಸೆಂಟರ್‌'ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈರಣ್ಣನ ತಂದೆ ವಿಠಲ ಇಂಡಿ (೬೮) ಎಂಬಾವರೇ ಯೋಧನನ್ನು ಹತ್ಯೆ ಮಾಡಿದ್ದಾರೆ.

ಈರಣ್ಣ ನಿನ್ನೆ ಕರ್ತವ್ಯದಿಂದ ಮನೆಗೆ ಬಂದಿದ್ದ. ಈ ವೇಳೆ ಹಣದ ವಿಚಾರಕ್ಕಾಗಿ ತಂದೆ ಮಗನ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ತಂದೆ ವಿಠಲ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಆಗ ಯೋಧ ಈರಣ್ಣ ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಅನುಸೂಯಾ (೪೦) ಸಹೋದರಿ ಪ್ರೀತಿ (೧೯) ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.