ಬೆಂಗಳೂರು(ಸೆ.26): ಬೆಂಗಳೂರಿನಲ್ಲಿ ಮಗನಿಂದಲೇ ತಂದೆಯ ಹತ್ಯೆಯಾಗಿದೆ. ರಾಜಗೋಪಾಲ ನಗರದ ದುಗಲಾಂಬಾ ದೇವಸ್ಥಾನದ ಬಳಿ ಘಟನೆ ಈ ಘಟನೆ ನಡೆದಿದ್ದು, ಕೊಲೆಯಾದ ತಂದೆಯನ್ನು ರಾಜಪ್ಪ ಎಂದು ಗುರುತಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈತನ ಪುತ್ರ 19 ವರ್ಷದ ಮಗ ಹರೀಶ್ ಎಂಬಾತ ಕೊಲೆ ಮಾಡಿದ್ದಾನೆ. ತಂದೆ ರಾಜಪ್ಪ ಪ್ರತಿನಿತ್ಯ ಕುಡಿದು ಬರುತ್ತಿದ್ದ. ಇದರಿಂದ ಮಗ ಬೇಸತ್ತಿದ್ದ, ಅಲ್ಲದೇ ನಿನ್ನೆ ರಾತ್ರಿ ಕುಡಿದು ಬಂದು ಹೆಂಡತಿ ನಾಗಮ್ಮಳನ್ನು ಹೊಡೆದಿದ್ದ. ನಂತರ ನಾಗಮ್ಮಳನ್ನು ಕೆ ಸಿ ಜನರಲ್ ಆಸ್ಪತ್ರೆಗೆ ಹರಿಶ್​ ದಾಖಲಿಸಿದ್ದ.

ಆಸ್ಪತ್ರೆಯಿಂದ ಮನೆಗೆ ಬಂದ ಪುತ್ರ ಹರೀಶ್​​​, ಮಲಗಿದ್ದ ರಾಜಪ್ಪನನ್ನು ಮಾರಾಕಾಸ್ತ್ರದಿಂದ ಹತ್ಯೆ ಮಾಡಿದ್ದಾನೆ. ಹರೀಶ್​​​​'ನನ್ನು ಬಂಧಿಸಿರುವ ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.