ಮಂಗಳೂರು(ಸೆ.12): ಆಕೆ, ಹೆತ್ತ ತಾಯಿಯ ಮುಖ ನೋಡಿ ಏಳೆಂಟು ವರ್ಷಗಳೇ ಕಳೆದಿವೆ. ತಾಯಿಯನ್ನು ನೋಡಲು ಹಂಬಲಿಸುತ್ತಿರುವ ಆಕೆಗೆ ತಂದೆಯೇ ವಿಲನ್ ಆಗಿದ್ದಾರೆ. ತಾಯಿಯಂದ ದೂರಾಗಿ ಹೈರಾಣಗಿರುವ ಆಕೆಯ ಕಣ್ಣೀರ ಕತೆ.

ಮೂಲತಃ ಮಂಗಳೂರು ನಿವಾಸಿಯಾದ ಮೀನಾಕ್ಷಿ ತನ್ನ ತಾಯಿಯ ಮುಖ ನೋಡಿ ಏಳೆಂಟು ವರ್ಷಗಳೇ ಕಳೆದಿವೆ. ಅಷ್ಟಕ್ಕೂ ಈಕೆ ತಾಯಿ ಮುಖ ನೋಡದಿರಲು ಕಾರಣರಾಗಿದ್ದು ಸ್ವಂತ ತಂದೆ. ಮಂಗಳೂರಿನಲ್ಲಿ ಪೋಲಿಸ್ ಸಬ್ ಇನ್ಸ್ ಫೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದಿರುವ ಗೋಪಾಲ ಕೊಟಪಾಡಿ ಎಂಬುವವರೇ ಮಗಳ ಪಾಲಿಗೆ ವಿಲನ್ ಆಗಿರುವ ಆಸಾಮಿ. ಇವರ ಮೊದಲ ಪತ್ನಿ ವಿಶಾಲಾಕ್ಷಿಯವರ ಮಗಳೇ ಮೀನಾಕ್ಷಿ. ಇವರ ದಾಂಪತ್ಯ ಜೀವನದ 5 ಮಕ್ಕಳಲ್ಲಿ ಮೀನಾಕ್ಷಿ 2 ನೇಯವಳು. ಕಳೆದ 2008 ರಲ್ಲಿ ವಿಶಾಲಾಕ್ಷಿ ಗಂಡನ ಸಹವಾಸವೇ ಬೇಡವೆಂದು ದೂರಾವಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಗೋಪಾಲ ಕೊಟಪಾಡಿ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದು. ಹೀಗಾಗಿ ವಿಶಾಲಾಕ್ಷಿ , ಪತಿಯಿಂದ ದೂರವಾಗುವ ವೇಳೆ ಮೀನಾಕ್ಷಿಯನ್ನು ಪತಿಯ ಬಳಿಯೇ ಬಿಟ್ಟು ಇನ್ನುಳಿದ ಮಕ್ಕಳ ಜೊತೆ ವಾಸವಾಗಿದ್ದಾರೆ.

ಗೋಪಾಲ ಕೊಟಪಾಡಿಯ ಇನ್ನೊಂದು ಸಂಬಂಧವನ್ನು ಸ್ವತಃ ಮೀನಾಕ್ಷಿಯೇ ಒಪ್ಪಿಕೊಂಡಿದ್ದು, ತಾಯಿ ವಿಶಾಲಾಕ್ಷಿಗೆ ಆಕ್ರೋಶವನ್ನುಂಟು ಮಾಡಿತ್ತು. ಹೀಗಾಗಿ ಮಗಳನ್ನು ತಂದೆಯೇ ಬಳಿಯೇ ಬಿಟ್ಟು ದೇಶಾಂತರ ಹೋಗಿದ್ದರು. ಬಳಿಕ ಗೋಪಾಲ ಕೊಟಪಾಡಿ ಅಕ್ರಮ ಸಂಬಂಧ ಹೊಂದಿದ್ದ ರಾಧಾ ಮತ್ತು ಮತ್ತಾಕೆಯ ಮಗಳನ್ನು ಕರೆದುಕೊಂಡು ಬಂದು ಮನೆಯಲ್ಲಿ ಸಂಸಾರ ಶುರುಮಾಡಿದ್ದ. ಆದ್ರೆ ಕೆಲ ದಿನಗಳು ಕಳೆದಂತೆ ತನೆಗೆ ತನ್ನ ತಂದೆಯೇ ವಾಮಾಚಾರ, ಮಾಟ ಮಂತ್ರ ಮಾಡಿಸುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ ಎನ್ನುತ್ತಾರೆ ಮೀನಾಕ್ಷಿ.

ಒಟ್ಟಿನಲ್ಲಿ ತಂದೆಯ ಅನೈತಿಕ ಸಂಬಂಧ , ತಾಯಿಯಿಂದ ದೂರಾಗಿ ಹೈರಾಣಾಗಿ ಹೋಗಿರುವ ಮೀನಾಕ್ಷಿಗೆ ತಾಯಿ ಇಲ್ಲದೆ ಬದುಕು ಅಸಾಧ್ಯವಾಗಿದೆ. ಇನ್ನೊಂದೆಡೆ ಪೋಲಿಸ್ ದರ್ಪದ ತಂದೆ ಮಾಟ - ವಾಮಾಚಾರದ ಮೂಲಕ ತನಗ್ಯಾವ ಗತಿ ತರುತ್ತಾರೋ ಎಂಬ ಭಯ ಕಾಡ ತೊಡಗಿದೆ.