ಸಾಕ್ಷ್ಯ ನಾಶಕ್ಕಾಗಿ ಗಲಾಟೆ ನಡೆದ ಕೆಫೆಯೇ ಕ್ಲೋಸ್..?

First Published 21, Feb 2018, 11:27 AM IST
Farzi cafe closed After Nalapad Attack Case
Highlights

ವಿದ್ವತ್ ಮೇಲೆ ನಲಪಾಡ್’ನಿಂದ ಹಲ್ಲೆ ನಡೆದ  ಫರ್ಜಿ ಕೆಫೆಯನ್ನು ಮುಚ್ಚಲಾಗಿದೆ.  ರಿನೋವೇಷನ್ ನೆಪದಲ್ಲಿ ಕೆಫೆಯನ್ನು ಮುಚ್ಚಲಾಗಿದ್ದು, ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಗಲಾಟೆಯ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಕೆಫೆಯನ್ನು ಮುಚ್ಚಿಸಿದ್ದಾರೆ. 

ಬೆಂಗಳೂರು : ವಿದ್ವತ್ ಮೇಲೆ ನಲಪಾಡ್’ನಿಂದ ಹಲ್ಲೆ ನಡೆದ  ಫರ್ಜಿ ಕೆಫೆಯನ್ನು ಮುಚ್ಚಲಾಗಿದೆ.  ರಿನೋವೇಷನ್ ನೆಪದಲ್ಲಿ ಕೆಫೆಯನ್ನು ಮುಚ್ಚಲಾಗಿದ್ದು, ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಗಲಾಟೆಯ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಕೆಫೆಯನ್ನು ಮುಚ್ಚಿಸಿದ್ದಾರೆ.  ಗಲಾಟೆಯ ದೃಶ್ಯಾವಳಿ ಯಾರಿಗೂ ಸಿಗಬಾರದೆಂದು, ಸಾಕ್ಷ್ಯ ನಾಶಕ್ಕಾಗಿ ಕಬ್ಬನ್ ಪಾರ್ಕ್ ಪೊಲೀಸರು ಮುಂದಾದರಾ ಎನ್ನು ಶಂಕೆ ಮೂಡಿದೆ. ಅಲ್ಲದೇ ರಹಸ್ಯ ಕ್ಯಾಮರಾದಲ್ಲಿ ಎಲ್ಲಾ ದೃಶ್ಯಾವಳಿಗಳೂ ಕೂಡ ಸೆರೆಯಾಗಿದೆ.

ಅಂದು ಹೋಟೆಲ್’ನಲ್ಲಿ ನಡೆದಿದ್ದೇನು..?

ಇನ್ನು ಅಂದು ನಡೆದ ಗಲಾಟೆಯಲ್ಲಿ ಏನಾಗಿದೆ ಎಂದು ಗಮನಿಸಿದಲ್ಲಿ ಮೂವರು ಗೆಳೆಯರೊಂದಿಗೆ ವಿದ್ವತ್ ಅಂದು ಕೆಫೆಗೆ ತೆರಳಿದ್ದನೆನ್ನಲಾಗಿದೆ.  ಪ್ರವೀಣ್ ವೆಂಕಟಾಚಲ, ಕಿರಣ್ ಹಾಗೂ ಮತ್ತೋರ್ವ ವ್ಯಕ್ತಿಯೊಂದಿಗೆ ತೆರಳಿದ್ದ. ವಿದ್ವತ್ ಫರ್ಜಿ ಕೆಫೆಯ ಕಾರ್ನರ್ ಟೇಬಲ್’ನಲ್ಲಿ ಪ್ರವೀಣ್ ಜೊತೆ ಕುಳಿತಿದ್ದ.

ಈ ವೇಳೆ ಒಟ್ಟು 7 ಮಂದಿಯೊಂದಿಗೆ ನಲಪಾಡ್ ಅಲ್ಲಿದೆ ಬಂದಿದ್ದ. ನಲಪಾಡ್ ಈ ವೇಳೆ ಶಾಂಪೈನ್ ಓಪನ್ ಮಾಡಿದ್ದು, ಶಾಂಪೈನ್ ವಿದ್ವತ್ ಕಾಲಿನ ಮೇಲೆ  ಚೆಲ್ಲಿತ್ತು. ಇದರಿಂದ ವಿದ್ವತ್ ಇದನ್ನು ಪ್ರಶ್ನೆ ಮಾಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ.

ಬಳಿಕ ನಲಪಾಡ್'ಗೆ ಹಾಗೂ ಆತನ ಸಹಚರರು ವಿದ್ವತ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕಿಸ್ ಮೈ ಫೂಟ್ ಎಂದು ಹೇಳಿದ್ದ ಎನ್ನಲಾಗಿದೆ. 

loader