ಭಾರತ್ ಮಾತಾ ಕೀ ಜೈ ಎಂದ ಮಾಜಿ ಸಿಎಂ: ಶೂ ಎಸೆದ ಉದ್ರಿಕ್ತರು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Aug 2018, 8:49 PM IST
Farooq Abdullah heckled during Eid prayers for chanting Bharat Mata ki Jai at Vajpayee meet
Highlights

ಭಾರತ್ ಮಾತಾ ಕೀ ಜೈ ಘೋಷಣೆ! ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಮೇಲೆ ಶೂ ಎಸೆತ! ಈದ್ ವೇಳೆ ಮಸೀದಿಯಲ್ಲಿ ಹಲ್ಲೆಗೆ ಯತ್ನ! ವಾಜಪೇಯಿ ಶ್ರದ್ಧಾಂಜಲಿ ಸಭೆಯಲ್ಲಿ ಘೋಷಣೆ ಕೂಗಿದ್ದ ಅಬ್ದುಲ್ಲಾ!  ಉದ್ರಿಕ್ತರಿಂದ ಅಬ್ದುಲ್ಲಾ ಮೇಲೆ ಹಲ್ಲೆಗೆ ಯತ್ನ! ಶಾಂತಿ ಸ್ಥಾಪನೆಗೆ ಹೋರಾಡುವುದಾಗಿ ಹೇಳಿದ ಅಬ್ದುಲ್ಲಾ
 

ಶ್ರೀನಗರ(ಆ.22): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ  ನಡೆದ ಶ್ರದ್ಧಾಂಜಲಿ ಸಭೆಯಲ್ಲಿ, ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ವಿರುದ್ಧ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. 

ಶ್ರೀನಗರದ ಹಜ್ರತ್ಬಾಲ್ ಮಸೀದಿಯಲ್ಲಿ ಈದ್ ಅಂಗವಾಗಿ ನಡೆದ ಪ್ರಾರ್ಥನೆ ವೇಳೆ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮೇಲೆ ಉದ್ರಿಕ್ತರ ಗುಂಪೊಂದು ಹಲ್ಲೆಗೆ ಯತ್ನಿಸಿದೆ. ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಆಕ್ರೋಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಾರೂಖ್ ಅಬ್ದುಲ್ಲಾ, ದೇಶ ಬದಲಾವಣೆಯಾಗಬೇಕಿದೆ, ನಾನು ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ತಲುಪಿಸಲು ಬಯಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಶಾಂತಿಯನ್ನು ಕದಡಲು, ವಿರೋಧಿಸುವುದಕ್ಕಾಗಿಯೇ ಕೆಲವರು ಇದ್ದಾರೆ, ಆದರೆ ನಾವು ಶಾಂತಿ ಸೌಹಾರ್ದತೆಗಾಗಿ ಪ್ರಯತ್ನಿಸುತ್ತಲೇ ಇರಬೇಕಾಗುತ್ತದೆ, ನನ್ನ ರಾಜ್ಯದ ಜನತೆ ಇನ್ನೂ ಎಷ್ಟು ಸಮಸ್ಯೆಗಳನ್ನು ಎದುರಿಸಬೇಕು? ಇಡೀ ದೇಶವೇ ಅಭಿವೃದ್ಧಿ ಕಾಣುತ್ತಿರುವಾಗ ನಾವೂ ಅದರ ಜೊತೆ ಹೆಜ್ಜೆ ಹಾಕಬೇಕಾಗುತ್ತದೆ ಎಂದು ಅಬ್ದುಲ್ಲಾ ಭಾವನಾತ್ಮಕವಾಗಿ ಹೇಳಿದ್ದಾರೆ. 

ಇತ್ತೀಚೆಗೆ ನವದೆಹಲಿಯಲ್ಲಿ ನಡೆದಿದ್ದ ಮಾಜಿ ಪ್ರಧನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಸರ್ವ ಪಕ್ಷಗಳ ಶ್ರದ್ಧಾಂಜಲಿ ಸಭೆಯಲ್ಲಿ ಫಾರೂಖ್ ಅಬ್ದುಲ್ಲಾ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದರು.

loader