Asianet Suvarna News Asianet Suvarna News

40ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ಅಧಿಕಾರಿಗಳಿಂದ ಮೋಸ: ಬರೋಬ್ಬರಿ 8 ಕೋಟಿ ಟೋಪಿ

ಹೆಸರಿಗೆ ಮಾತ್ರ ರೈತರಿಗೆ ಸಾಲ, ಆದ್ರೆ ಸಾಲದ ಹಣ ಇನ್ಯಾರದೋ ಖಾತೆಗೆ ವರ್ಗಾವಣೆ. ಪ್ರತಿಷ್ಠಿತ ಕಾರ್ಪೋರೇಷನ್ ಬ್ಯಾಂಕ್ನ ಅಧಿಕಾರಿಗಳು ಮಾಡಿದ ಮೋಸಕ್ಕೆ 40ಕ್ಕೂ ಹೆಚ್ಚು ರೈತರಿಗೆ 8 ಕೋಟಿ ರೂಪಾಯಿ ಮಕ್ಮಲ್ ಟೋಪಿ ಬಿದ್ದಿದೆ. ಬರಗಾಲದಲ್ಲಿ ಗಾಯದ ಮೇಲೆ ಬರೆ ಎಳೆದ ಬ್ಯಾಂಕ್ನ ಮೋಸಕ್ಕೆ  ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಒಂದು ವರದಿ.

Farmers Were Cheated By The Bank Officers
  • Facebook
  • Twitter
  • Whatsapp

ಶಿವಮೊಗ್ಗ(ಮೇ.21): ಹೆಸರಿಗೆ ಮಾತ್ರ ರೈತರಿಗೆ ಸಾಲ, ಆದ್ರೆ ಸಾಲದ ಹಣ ಇನ್ಯಾರದೋ ಖಾತೆಗೆ ವರ್ಗಾವಣೆ. ಪ್ರತಿಷ್ಠಿತ ಕಾರ್ಪೋರೇಷನ್ ಬ್ಯಾಂಕ್ನ ಅಧಿಕಾರಿಗಳು ಮಾಡಿದ ಮೋಸಕ್ಕೆ 40ಕ್ಕೂ ಹೆಚ್ಚು ರೈತರಿಗೆ 8 ಕೋಟಿ ರೂಪಾಯಿ ಮಕ್ಮಲ್ ಟೋಪಿ ಬಿದ್ದಿದೆ. ಬರಗಾಲದಲ್ಲಿ ಗಾಯದ ಮೇಲೆ ಬರೆ ಎಳೆದ ಬ್ಯಾಂಕ್ನ ಮೋಸಕ್ಕೆ  ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಒಂದು ವರದಿ.

ಶಿವಮೊಗ್ಗ ಜಿಲ್ಲೆಯ ಬಿ.ಹೆಚ್.ರಸ್ತೆಯಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಮ್ಯಾನೇಜರ್ ಬಾಲಕೃಷ್ಣ ಮೂರ್ತಿ ಮತ್ತು ಫೀಲ್ಡ್ ಆಫಿಸರ್ ಮಧುಸೂದನ್ ಎಂಬವವರು ಮಾಡಿದ ಎಡವಟ್ಟಿನಿಂದ 40ಕ್ಕೂ ಹೆಚ್ಚು ರೈತರು ಬೀದಿಗೆ ಬಿದ್ದಿದ್ದಾರೆ. ರೈತರಿಂದ ಜಮೀನಿನ ಪಹಣಿ ಪತ್ರ ಹಾಗೂ ಸಹಿ ಮಾಡಿದ ಖಾಲಿ ಚೆಕ್ಗಳನ್ನು ಪಡೆದು ಅವರ ಹೆಸರಲ್ಲೇ ಜಮೀನು ಅಭಿವೃದ್ಧಿ ಸಾಲ, ಬೆಳೆ ಸಾಲ ಎಂದೆಲ್ಲ ಸಾಲ ಮಂಜೂರು ಮಾಡುತ್ತಿದ್ದರು. ನಂತರ ಬೇಕಾದವರ ಹೆಸರಗಳನ್ನು ಬರೆದು RTGS ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಬೆಳೆ ಸಾಲದ ಬಗ್ಗೆ ರೈತರು ಕೇಳಿದಾಗ ಇಂದು, ನಾಳೆ ಅಂತ ಕಳೆದ 6 ತಿಂಗಳಿನಿಂದ ಸತಾಯಿಸುತ್ತಿದ್ರು. ರೈತರು ತಮ್ಮ ಬ್ಯಾಂಕ್ ಪಾಸ್ ಬುಕ್ ಎಂಟ್ರಿ ಮಾಡಿಸಿಕೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಈಗಾಗಲೇ ಬ್ಯಾಂಕ್ ಆಡಳಿತ ಮಂಡಳಿ ಈ ಬಗ್ಗೆ ಪ್ರಾಥಮಿಕ ತನಿಖೆ ಕೈಗೊಂಡಿದ್ದು ವಂಚಕ ಅಧಿಕಾರಿಗಳನ್ನು ಅಮಾನತು ಮಾಡಿದೆ. ಒಟ್ನಲ್ಲಿ ಬ್ಯಾಂಕ್ನ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ರೈತರು ಕಂಗಾಲಾಗಿದ್ದು ನ್ಯಾಯಕ್ಕಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Follow Us:
Download App:
  • android
  • ios