ತುಮಕೂರು(ನ.30): ಹಾಲಿಗೆ ನೀಡುತ್ತಿರುವ ದರ ಹೆಚ್ಚಿಸಬೇಕೆಂದು ಆಗ್ರಹಿಸಿ ಹಾಲನ್ನು ಚೆಲ್ಲುವ ಮೂಲಕ ತಿಪಟೂರು ತಾಲೂಕಿನ ರೈತರು ವಿಭಿನ್ನ ಪ್ರತಿಭಟನೆ ನಡೆಸಿದರು.

ಗೌಡನಕಟ್ಟೆ ಹಾಲಿನ ಡೈರಿ ಮುಂದೆ ಸುಮಾರು 30 ಲೀಟರ್ ಗೂ ಹೆಚ್ಚು ಹಾಲನ್ನು ಚೆಲ್ಲಿದ ರೈತರು, ಕೆಎಂಎಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 20 ರೂಪಾಯಿ ನೀಡಲಾಗುತ್ತಿದೆ. ಅದರಲ್ಲಿ ಪ್ರೋತ್ಸಾಹ ಧನವಾಗಿ 4 ರೂಪಾಯಿ ನೀಡಲಾಗುತ್ತಿದ್ದು ಇದನ್ನು ತುಮಕೂರು ಹಾಲು ಒಕ್ಕೂಟ ಸ್ದಗಿತಗೊಳಿಸಿದೆ ಎಂದು ಆರೋಪಿಸಿದ್ರು.. ಪ್ರೋತ್ಸಾಹ ಧನ ಸೇರಿ ಪ್ರತಿ ಲೀಟರ್ ಹಾಲಿಗೆ 30 ರೂ. ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.