ಜನವರಿ 19ರಂದು ಸಿಎಂ ಸಿದ್ದರಾಮಯ್ಯನವರ ಅಧಿಕೃತ ಟ್ವಿಟರ್​'ನಲ್ಲಿ  ಕೇಂದ್ರ ಸರ್ಕಾರ ರಾಜ್ಯದ ಬರ ಪರಿಹಾರಕ್ಕಾಗಿ 1782 ಕೋಟಿ ರೂ. ಘೋಷಿಸಿದ್ದರೂ, ಇದುವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರದ ಜೊತೆ ನಾವು ಸತತ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಬೆಂಗಳೂರು (ಜ.21): ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಕೊಟ್ಟಿತಾ? ಇಲ್ಲವಾ? ಇದು ದೊಡ್ಡ ಯಕ್ಷಪ್ರಶ್ನೆಯಾಗಿ ಕಾಡುತ್ತಾ ಇದೆ.

ಜನವರಿ 19ರಂದು ಸಿಎಂ ಸಿದ್ದರಾಮಯ್ಯನವರ ಅಧಿಕೃತ ಟ್ವಿಟರ್​'ನಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬರ ಪರಿಹಾರಕ್ಕಾಗಿ 1782 ಕೋಟಿ ರೂ. ಘೋಷಿಸಿದ್ದರೂ, ಇದುವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರದ ಜೊತೆ ನಾವು ಸತತ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಆದರೆ, ಇತ್ತ ಕೇಂದ್ರ ಸಚಿವ ಅನಂತ ಕುಮಾರ್, ರಾಜ್ಯ ಸರ್ಕಾರಕ್ಕೆ ಕೇಂದ್ರ ಪರಿಹಾರ ಕೊಟ್ಟಿದೆ. ರಾಜ್ಯ ಸರ್ಕಾರವೇ ಕೆಲಸ ಮಾಡುತ್ತಿಲ್ಲ ಎನ್ನುತ್ತಿದ್ದಾರೆ.

ಆದರೆ, ಇದುವರೆಗೆ ಕೇಂದ್ರದ ಬರ ಪರಿಹಾರ ರಾಜ್ಯವನ್ನು ತಲುಪಿತಾ? ಇಲ್ಲವಾ? ಎಂದು ಸ್ಪಷ್ಟವಾಗುತ್ತಿಲ್ಲ. ಎರಡೂ ಪಕ್ಷಗಳ ರಾಜಕೀಯದಲ್ಲಿ ನರಳುತ್ತಿರುವುದು ರಾಜ್ಯದ ರೈತರು ಎನ್ನುವುದು ಮಾತ್ರ ವಿಪರ್ಯಾಸ.