Asianet Suvarna News Asianet Suvarna News

ಇಂದಿನಿಂದ ತರಕಾರಿ, ಹಾಲು, ಅಗತ್ಯ ವಸ್ತುಗಳ ಪೂರೈಕೆ ಇರಲ್ಲ!

 ಜೂನ್‌ 1ರಿಂದ ಜೂನ್‌ 10ರವರೆಗೆ ಮುಷ್ಕರ ನಡೆಸಲು ದೇಶದ ಹಲವೆಡೆಯ ರೈತರು ನಿರ್ಧರಿಸಿದ್ದಾರೆ. ಆದರೆ ಇದು ಯಾವುದೋ ಒಂದು ಸ್ಥಳದಲ್ಲಿ ಸೇರಿ ಪ್ರತಿಭಟನೆ ಮಾಡುವ ಮುಷ್ಕರವಲ್ಲ. ಬದಲಾಗಿ, ತರಕಾರಿ ಹಾಗೂ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಿ ಮಾಡುವ ಮುಷ್ಕರ ಇದಾಗಿದ್ದು, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

Farmers protest begins from today

ನವದೆಹಲಿ (ಜೂ. 01):  ಜೂನ್‌ 1ರಿಂದ ಜೂನ್‌ 10ರವರೆಗೆ ಮುಷ್ಕರ ನಡೆಸಲು ದೇಶದ ಹಲವೆಡೆಯ ರೈತರು ನಿರ್ಧರಿಸಿದ್ದಾರೆ. ಆದರೆ ಇದು ಯಾವುದೋ ಒಂದು ಸ್ಥಳದಲ್ಲಿ ಸೇರಿ ಪ್ರತಿಭಟನೆ ಮಾಡುವ ಮುಷ್ಕರವಲ್ಲ. ಬದಲಾಗಿ, ತರಕಾರಿ ಹಾಗೂ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಿ ಮಾಡುವ ಮುಷ್ಕರ ಇದಾಗಿದ್ದು, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ದೇಶದ ಸುಮಾರು 130 ರೈತಪರ ಸಂಘಟನೆಗಳನ್ನು ಪಳಗೊಂಡ ರಾಷ್ಟ್ರೀಯ ಕಿಸಾನ್‌ ಮಹಾಸಂಘದ ಆಶ್ರಯದಲ್ಲಿ ಈ ಮುಷ್ಕರ ನಡೆಯಲಿದೆ.

ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡುವಂತೆ, ಸಾಲ ಮನ್ನಾ ಮಾಡುವಂತೆ ಮತ್ತು ರೈತರ ಜೀವನಾಡಿಯಾದ ಜನರೇಟರ್‌/ಟ್ರ್ಯಾಕ್ಟರ್‌ಗೆ ಬೇಕಾದ ಡೀಸೆಲ್‌ ಬೆಲೆ ಏರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಈ ಮುಷ್ಕರ ನಿಗದಿಯಾಗಿದೆ. 

Follow Us:
Download App:
  • android
  • ios