ಬುಲೆಟ್ ಟ್ರೈನ್ ಯೋಜನೆಗೆ ಆರಂಭಿಕ ವಿಘ್ನ

news | Friday, May 4th, 2018
Suvarna WebDesk
Highlights
 • ಮೋದಿ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ ಬುಲೆಟ್ ಟ್ರೈನ್, ಎಕ್ಸ್‌ಪ್ರೆಸ್ ವೇ
 • ಕೃಷಿ ಭೂಮಿ ಸ್ವಾಧೀನಕ್ಕೆ ಮಹಾರಾಷ್ಟ್ರ ರೈತರಿಂದ ವಿರೋಧ

ಮುಂಬೈ (ಮೇ.04) : ಕೆಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಯೊಜನೆಯಾಗಿರುವ ಬುಲೆಟ್ ಟ್ರೈನ್ ಹಾಗೂ ಎಕ್ಸ್‌ಪ್ರೆಸ್ ವೇ ಯೋಜನೆಗೆ ಆರಂಭಿಕ ವಿಘ್ನ ಎದುರಾಗಿದೆ. 

ಯೋಜನೆಗೆ ಸಾವಿರಾರು ಎಕರೆ ಕೃಷಿ ಭೂಮಿ ಹಾಗೂ ಮನೆ-ಮಠಗಳನ್ನು ಸ್ವಾಧೀನ ಪಡಿಸುವುದನ್ನು ವಿರೋಧಿಸಿ, ಮಹಾರಾಷ್ಟ್ರದ ಥಾನೆ- ಪಾಲ್ಘಾರ್ ಜಿಲ್ಲೆಯ ಸುಮಾರು 50 ಸಾವಿರ ರೈತರು ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಆ ಯೋಜನೆಗಳಿಂದ ಆದಿವಾಸಿಗಳಿಗೆ, ಗ್ರಾಮಸ್ಥರಿಗೆ ಮತ್ತು ಕೃಷಿಕರಿಗೆ ಯಾವುದೇ ಪ್ರಯೋಜನವಿಲ್ಲ, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲವೆಂದು ರೈತರು ಎಚ್ಚರಿಸಿದ್ದಾರೆ.

ಮುಂಬೈ- ಅಹಮದಾಬಾದ್ ಬುಲೆಟ್ ಟ್ರೈನ್ ಹಾಗೂ ಮುಂಬೈ- ವಡೋದರಾ ಎಕ್ಸ್‌ಪ್ರೆಸ್ ವೇ ಯೋಜನೆಗಳು  ಖಾಸಗೀಕರಣದ ಪ್ರಯತ್ನವಾಗಿದೆಯೆಂದು, ಪ್ರತಿಭಟನೆಯಲ್ಲಿ ಸೇರಿದ್ದ ಸುಮಾರು  60 ಗ್ರಾಮಗಳ ರೈತರು  ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಮುಂದಿನ ಪಾಲ್ಘಾರ್ ಉಪ-ಚುನಾವಣೆಯಲ್ಲಿ ಬಿಜೆಪಿಯುನ್ನು ಸೋಲಿಸುವುದಾಗಿ ಎಚ್ಚರಿಸಿದ್ದಾರೆ.

 

Comments 0
Add Comment

  Related Posts

  Amit Shah Visits Family of Farmers Committed Suicide

  video | Saturday, March 31st, 2018

  Congress Leader Accused of Cheating Farmers

  video | Thursday, March 22nd, 2018

  Robert vadra land deal case part 2

  video | Friday, March 9th, 2018

  Amit Shah Visits Family of Farmers Committed Suicide

  video | Saturday, March 31st, 2018
  Suvarna WebDesk