ಮುಂಬೈನ ಅ. 21 ರಂದು ನ ಡೆಯಲಿರುವ ಸಭೆಯಲ್ಲಿ ರಾಜ್ಯ ಸರ್ಕಾರದ ಕಾರ್ಯತಂತ್ರ ಯಾವ ರೀತಿ ಇರಬೇಕು ಎಂಬುದರ ಕುರಿತು ಹಲವು ಸಲಹೆ, ಸೂಚನೆಗಳು ವ್ಯಕ್ತವಾದವು. ಹೋರಾಟಗಾರರು ನೀಡಿದ ಸಲಹೆ ಸೂಚನೆಗಳ ಆಧಾರದ ಮೇಲೆ ಸಭೆಯಲ್ಲಿ ಅಂತಿಮವಾಗಿ 10 ನಿರ್ಣಯಗಳನ್ನು ಸರ್ಕಾರದ ಮುಂದೆ ಮಂಡಿಸಲು ತಿರ್ಮಾನಿಸಲಾಯಿತು.

ಹುಬ್ಬಳ್ಳಿ: ಮಹಾದಾಯಿ ಹಾಗೂ ಕಳಸಾ ಬಂಡೂರಿ ನೀರಿಗಾಗಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ನಾಲ್ಕು ಜಿಲ್ಲೆಗಳಲ್ಲಿ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಮಹದಾಯಿ ನ್ಯಾಯಾಧಿಕರಣದಲ್ಲಿ ರಾಜ್ಯದ ಅರ್ಜಿ ವಜಾಗೊಂಡ ಬಳಿಕ ಹೋರಾಟ ಮತ್ತಷ್ಟು ತೀವ್ರಗೊಂಡಿತ್ತು. ಆದ್ರೆ ಇದೀಗ ವಿವಾದ ಇತ್ಯರ್ಥಗೊಳ್ಳುವ ಭರವಸೆ ಮೂಡಿದೆ. ಇದೇ ತಿಂಗಳ 21 ರಂದು ಮುಂಬೈನಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ರೈತರಲ್ಲಿ ಒಂದಿಷ್ಟು ಭರವಸೆ ಮೂಡಿಸಿದೆ. ಈಗಲಾದರೂ ಕಳಸಾ ಹೋರಾಟಕ್ಕೆ ನ್ಯಾಯಾ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜನಪ್ರತಿನಿಧಿಗಳು ಒಂದಡೆ ಸೇರಿ ಇಂದು ಸಮಾಲೋಚನೆ ನಡೆಸಿದರು, ಮುಂಬೈನ ಅ. 21 ರಂದು ನ ಡೆಯಲಿರುವ ಸಭೆಯಲ್ಲಿ ರಾಜ್ಯ ಸರ್ಕಾರದ ಕಾರ್ಯತಂತ್ರ ಯಾವ ರೀತಿ ಇರಬೇಕು ಎಂಬುದರ ಕುರಿತು ಹಲವು ಸಲಹೆ, ಸೂಚನೆಗಳು ವ್ಯಕ್ತವಾದವು. ಹೋರಾಟಗಾರರು ನೀಡಿದ ಸಲಹೆ ಸೂಚನೆಗಳ ಆಧಾರದ ಮೇಲೆ ಸಭೆಯಲ್ಲಿ ಅಂತಿಮವಾಗಿ 10 ನಿರ್ಣಯಗಳನ್ನು ಸರ್ಕಾರದ ಮುಂದೆ ಮಂಡಿಸಲು ತಿರ್ಮಾನಿಸಲಾಯಿತು.

ಸಭೆಯಲ್ಲಿ ವ್ಯಕ್ತವಾದ ನಿರ್ಣಯಗಳು

1) ಅ.21 ರ ಸಭೆಗೂ ಮುನ್ನ ಮುಖ್ಯಮಂತ್ರಿಗಳು ಮೂರು ಪಕ್ಷಗಳ ಮುಖಂಡರು ಹಾಗೂ ರೈತರ ಸಭೆ ಕರೆಯಬೇಕು.

2) ಮಹಾದಾಯಿ ಬಗ್ಗೆ ಕಾನೂನು ತಜ್ಜರು,ಜನಪ್ರತಿನಿಧಿಗಳು ಹಾಗೂ ರೈತರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಬೇಕು.

3) ತಕ್ಷಣವೇ ಮಹಾದಾಯಿಗಾಗಿ ವಿಶೇಷ ಅಧಿವೇಶ ಕರೆಯಬೇಕು..

4) ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಿ ನ್ಯಾಯಾಧಿರಣದ ಹೊರಗಡೆ ಸಮಸ್ಯೆ ಇತ್ಯರ್ಥಪಡಿಸಬೇಕು.

5) ರಾಜ್ಯ ಸರ್ಕಾರ ಕಾನೂನು ಹಾಗೂ ತಾಂತ್ರಿಕ ವಿಷಯಗಳನ್ನು ಗಂಭೀರವಾಗಿ ಅಧ್ಯಯ ಮಾಡಿಕೊಂಡು ಸಭೆಯಲ್ಲಿ ಪಾಲ್ಗೊಳ್ಳಬೇಕು.

6) ಪ್ರಧಾನಿ ನರೇಂದ್ರ ಮೋದಿಯವರ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ಎಲ್ಲಾ ಸಂಸದರು ಪ್ರಧಾನಿ ಮೇಲೆ ಒತ್ತಡಹೇರಬೇಕು.

7) ಮಹದಾಯಿ ಹೋರಾಟಗಾರರ ಮೇಲಿನ ಎಲ್ಲಾ ಕೇಸ್'ಗಳನ್ನು ತಕ್ಷಣವೇ ಬೇಷರತ್ತಾಗಿ ಹಿಂಪಡೆಯಬೇಕು.

8) ಉತ್ತರ ಕರ್ನಾಟಕ ಎಲ್ಲಾ ಮಠಾಧಿಶರು ಸಭೆ ಸೇರಿ ಕಳಸಾ ಬಂಡೂರಿ ಜಾರಿಗೆ ನಿರ್ಣಯ ಕೈಗೊಳ್ಳಬೇಕು.

9) ಕಾವೇರಿ ಕೊಳ್ಳದ ರೈತರಿಗೆ ಪರಿಹಾರವನ್ನು ಘೋಷಸಿದಂತೆ ಮಲಪ್ರಭಾ ಅಚ್ಚುಕಟ್ಟು ರೈತರಿಗೂ ವಿಶೇಷ ಪ್ಯಾಕೇಜ್'ನ್ನು ಸರ್ಕಾರ ಘೋಷಣೆ ಮಾಡಬೇಕು.

10) ಪೊಲೀಸ್ ದೌರ್ಜನ್ಯಕ್ಕೆ ತುತ್ತಾಗಿ, ಹಲ್ಲೆಗೊಳ್ಳಗಾದವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.