ಹಾಸನ(ಸೆ.25): ಬೆಳೆಗಳು ಒಣಗುತ್ತಿರುವ ತಮ್ಮ ಜಮೀನುಗಳಿಗೆ ನೀರು ಬಿಡದ ಸಚಿವರು ಹಾಗೂ ಶಾಸಕರನ್ನು ಅಪಹರಣ ಮಾಡಲು 100 ಕ್ಕೂ ಹೆಚ್ಚು ರೈತರ ತಂಡ ಹೊಂಚು ಹಾಕಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಅಪಹರಣ ಸಂಚು

ನಾಲೆಗಳಲ್ಲಿ ನೀರಿಲ್ಲ ಬೆಳೆಗಳು ಒಣಗಿವೆ ಎಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ರೈತರು ಕಾವೇರಿ ಕಣಿವೆಯ ಪ್ರದೇಶಗಳಿಗೆ ಅಧ್ಯಯನ ಪ್ರವಾಸಕ್ಕೆ ಹೋಗಿರುವ ಪತ್ರಕರ್ತರ ಜತೆ ಸಚಿವರು, ಶಾಸಕರು ಬಂದಿದ್ದರೆ ಅವರಿಗೆ ಅಡ್ಡಿಪಡಿಸಿ ಬಲವಂತವಾಗಿ ತಮ್ಮ ಹಳ್ಳಿಗಳಿಗೆ ಕರೆದುಕೊಂಡು ಒಣಗುತ್ತಿರುವ ತಮ್ಮ ಜಮೀನನ್ನು ತೋರಿಸಿ ಕಷ್ಟವನ್ನು ಹೇಳಿ ನೀರು ಬಿಡಿಸಿಕೊಳ್ಳಲು ಗುಬ್ಬಿ ತಾಲೂಕಿನ ಕಿಟ್ಟದ ಕುಪ್ಪೆ ಬಳಿ 100ಕ್ಕೂ ಹೆಚ್ಚು ರೈತರ ತಂಡ ಸಜ್ಜಾಗಿದ್ದರು.

ಅಪಹರಿಸಲು ಸಲುವಾಗಿಯೇ ರೈತರು 2 ಕಾರುಗಳನ್ನು ರೆಡಿ ಮಾಡಿಕೊಂಡಿದ್ದರು. ತುಮಕೂರು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಬಂದ ಕೂಡಲೆ ಬಸ್ಸುಗಳನ್ನು ತಡೆ ಹಿಡಿದು ಜನಪ್ರತಿನಿಧಿಗಳನ್ನು ಸಮೀಪದ ಹಳ್ಳಿಗೆ ಕರೆದೊಯ್ಯಲು ತಂಡ ನಿರ್ಧರಿಸಿತ್ತು. ಆದರೆ ಅಧ್ಯಯನ ಪ್ರವಾಸಕ್ಕೆ ಪತ್ರಕರ್ತರು ಮಾತ್ರ ಬರುತ್ತಿದ್ದಾರೆ ಎಂಬ ಮಾಹಿತಿ ಖಚಿತಗೊಂಡ ಮೇಲೆ ಈ ಯೋಜನೆಯನ್ನು ರೈತರು ಕೈಬಿಟ್ಟದ್ದಾರೆ. ಅಂತು ಸಚಿವರುಗಳು ಕಿಡ್ಯ್ನಾಪ್ ಆಗದೆ ದೊಡ್ಡ ಸುದ್ದಿಯಾಗುವುದನ್ನು ತಪ್ಪಿಸಿಕೊಂಡಿದ್ದಾರೆ.