Asianet Suvarna News Asianet Suvarna News

ಭಾರೀ ಸಂಚಲನ ಸೃಷ್ಟಿಸಿದ ಕೃಷ್ಣಮಠದ ಇಫ್ತಾರ್: ಪೇಜಾವರ ಶ್ರೀಗಳ ನಡೆಗೆ ಬಿಜೆಪಿಯಲ್ಲೇ ಪರ ಹಾಗೂ ವಿರೋಧ

ಕೃಷ್ಣ ಮಠದಲ್ಲಿ ಮುಸಲ್ಮಾನರಿಗೆ ಇಫ್ತಾರ್ ನೀಡಿದ್ದ ಪೇಜಾವರ ಶ್ರೀಗಳ ನಡೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಹಲವರು ಶ್ರೀಗಳ ನಡೆಯನ್ನ ಸ್ವಾಗತಿಸಿದರೆ. ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಶ್ರೀಗಳ ನಡೆ ಸರಿಯೇ ತಪ್ಪೇ ಅನ್ನೋ ಸುವರ್ಣ ನ್ಯೂಸ್ ಜನಾಭಿಪ್ರಾಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Far And Against two opinions on iftar arranged by pejavara shri at udupi temple

ಬೆಂಗಳೂರು(ಜೂ.28): ಕೃಷ್ಣ ಮಠದಲ್ಲಿ ಮುಸಲ್ಮಾನರಿಗೆ ಇಫ್ತಾರ್ ನೀಡಿದ್ದ ಪೇಜಾವರ ಶ್ರೀಗಳ ನಡೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಹಲವರು ಶ್ರೀಗಳ ನಡೆಯನ್ನ ಸ್ವಾಗತಿಸಿದರೆ. ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಶ್ರೀಗಳ ನಡೆ ಸರಿಯೇ ತಪ್ಪೇ ಅನ್ನೋ ಸುವರ್ಣ ನ್ಯೂಸ್ ಜನಾಭಿಪ್ರಾಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ತಣ್ಣಗಾಗದ ‘ಇಫ್ತಾರ್’

ಉಡುಪಿಯ ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳು ಮುಸಲ್ಮಾನರಿಗೆ ಇಫ್ತಾರ್ ಕೂಟ ಆಯೋಜನೆ ಬಿಜೆಪಿಯಲ್ಲೇ ಪರ- ವಿರೋಧ ಚರ್ಚೆಗೆ ಕಾರಣವಾಗಿದೆ. ಶ್ರೀರಾಮ ಸೇನೆ ಏನಾದರೂ ಪೇಜಾವರ ಸ್ವಾಮೀಜಿ ವಿರುದ್ಧ ಪ್ರತಿಭಟನೆ ನಡೆಸಿದೆ. ಆದರೆ, ಸ್ವಾಮೀಜಿಗೆ ಬೆಂಬಲವಾಗಿ ನಿಲ್ಲಲು ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ನಿಂತಿದೆ. ಧಾರವಾಡದಲ್ಲೂ ಕೂಡ ಮುತಾಲಿಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಈಗಾಗಲೇ ದಕ್ಷಿಣ ಕನ್ನಡ ಹೊತ್ತಿ ಉರೀತಿದೆ. ಮುಸಲ್ಮಾನರಿಗೆ ಪೇಜಾವರ ಶ್ರೀಗಳ ಇಫ್ತಾರ್ ಕೂಟ ನೀಡಬಾರದಿತ್ತು. ಈ ಬಗ್ಗೆ ಶ್ರೀಗಳೇ ಸ್ಪಷ್ಟನೆ ನೀಡಿದ್ದು ನಾನು ಮಾತಾಡಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇನ್ನೂ ಪೇಜಾವರ ಶ್ರೀಗಳ ನಡೆಗೆ ಬಿಜೆಪಿ ಮಾಜಿ ಸಿಎಂ ಜಗದೀಶ್ ಶೆಟ್ಟರ್​, ಮತ್ತು ಮಾಜಿ ಡಿಸಿಎಂ ಆರ್. ಅಶೋಕ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ತಮ್ಮ ನಡೆಯನ್ನ ಪೇಜಾವರ ಮಠದ ವಿಶ್ವೇಶತೀರ್ಥರು ಮತ್ತೊಮ್ಮೆ ಸಮರ್ಥನೆ ಮಾಡಿ​ಕೊಂಡಿದ್ದಾರೆ. ಇನ್ನು ಪೇಜಾವರ ಶ್ರೀಗಳ ನಡೆ ಸರಿಯೋ ತಪ್ಪೋ ಅಂತ ಸುವರ್ಣ ನ್ಯೂಸ್ ಜನಾಭಿಪ್ರಾಯ ಸಂಗ್ರಹಿಸಿತು. ಇದಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಒಟ್ನಲ್ಲಿ ಪೇಜಾವರ ಶ್ರೀ ಮತ್ತು ಹಿಂದುವಾದ ಫೈಟ್ ಇನ್ನೂ ನಿಂತಿಲ್ಲ.

 

Follow Us:
Download App:
  • android
  • ios