'ಹಣ ಬದಲಾಯಿಸಲು ಹೋಗುವ ಗ್ರಾಹಕರಿಗೆ ಉಚಿತ ಪ್ರಯಾಣ' ಇಂತಹ ಬ್ಯಾನರ್'ನ್ನು ತನ್ನ ಆಟೋ ಮುಂದೆ ಹಾಕಿ ಮಾನವೀಯ ಕಾರ್ಯಕ್ಕೆ ಕೈ ಹಾಕಿದವರು ಪುತ್ತೂರಿನ ಸಾದಿಕ್. ಕಳೆದೆರಡು ದಿನಗಳಿಂದ ಈತನ ಆಟೋದಲ್ಲಿ ನೂರಾರು ಮಂದಿ ಬ್ಯಾಂಕ್'​ಗೆ ಹೋಗಿ ನೋಟು ಬಲದಾಯಿಸಿಕೊಂಡು ಬಂದಿದ್ದಾರೆ.

ಮಂಗಳೂರು(ನ.17):ನೋಟಿಗಾಗಿ ಜನತೆಯ ಪರದಾಟ ಎಲ್ಲಡೆ ಮುಂದುವರೆದಿದೆ. ಆದರೆ ಕರಾವಳಿಯ ಗ್ರಾಮೀಣ ಪ್ರದೇಶದ ಆಟೋ ಚಾಲಕರೊಬ್ಬರು ಜನತೆಗೆ ತಮ್ಮ ಅಳಿಲು ಸೇವೆಯನ್ನ ಅರ್ಪಿಸಿದ್ದಾರೆ. ಹಣ ಬದಲಾವಣೆಗಾಗಿ ಬ್ಯಾಂಕ್​'ಗೆ ಹೋಗುವ ಸಾರ್ವಜನಿಕರಿಗೆ ಉಚಿತ ಆಟೋ ಸೇವೆ ನೀಡುವ ಮೂಲಕ, ಮೋದಿ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಯಾರು ಈ ಮಾದರಿ ಪುರುಷ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

'ಹಣ ಬದಲಾಯಿಸಲು ಹೋಗುವ ಗ್ರಾಹಕರಿಗೆ ಉಚಿತ ಪ್ರಯಾಣ' ಇಂತಹ ಬ್ಯಾನರ್'ನ್ನು ತನ್ನ ಆಟೋ ಮುಂದೆ ಹಾಕಿ ಮಾನವೀಯ ಕಾರ್ಯಕ್ಕೆ ಕೈ ಹಾಕಿದವರು ಪುತ್ತೂರಿನ ಸಾದಿಕ್. ಕಳೆದೆರಡು ದಿನಗಳಿಂದ ಈತನ ಆಟೋದಲ್ಲಿ ನೂರಾರು ಮಂದಿ ಬ್ಯಾಂಕ್'​ಗೆ ಹೋಗಿ ನೋಟು ಬಲದಾಯಿಸಿಕೊಂಡು ಬಂದಿದ್ದಾರೆ.

ಸಾದಿಕ್ ಪ್ರಧಾನಿ ಮೋದಿಯ ದೊಡ್ಡ ಅಭಿಮಾನಿ. ಹೀಗಾಗಿ ಮೋದಿಯವರು ನೋಟ್ ಬ್ಯಾನ್ ಮೂಲಕ ಕಪ್ಪು ಕುಳಗಳ ವಿರುದ್ಧ ಸಮರ ಸಾರಿದ್ದಕ್ಕೆ ಇವರಿಗೆ ಎಲ್ಲಿಲ್ಲದ ಸಂತಸ. ಜೊತೆಗೆ ಅವರ ಈ ಕಾರ್ಯಕ್ಕೆ ನನ್ನದೂ ಒಂದು ಅಳಿಲು ಸೇವೆ ಎನ್ನುವ ರೀತಿ. ಬ್ಯಾಂಕ್'​ಗೆ ನೋಟು ವಿನಿಮಯ ಮಾಡಿಕೊಳ್ಳಲು ತೆರಳುವ ಸಾರ್ವಜನಿಕರಿಗೆ ತಮ್ಮ ಆಟೋದಲ್ಲಿ ಉಚಿತ ಪಿಕಪ್ ಡ್ರಾಪ್ ನೀಡುತ್ತಿದ್ದಾರೆ.

ಸಾದಿಕ ಸೇವೆಯಿಂದ ಜನಸಾಮಾನ್ಯರು ಖೂಷಿಯಾಗಿದ್ದಾರೆ. ಅಷ್ಟೇ ಅಲ್ಲದೆ ಮೋದಿ ಅಭಿಮಾನಿಗಳು ಸಂತಸವ್ಯಕ್ತಪಡಿಸಿದ್ದು, ಈ ವಿಚಾರವನ್ನು ಟ್ವಿಟ್ಟರ್ ಮೂಲಕ ಪ್ರಧಾನಿಗೂ ಮುಟ್ಟಿಸುವ ಕೆಲಸ ಮಾಡಿದ್ದಾರೆ.

ದಿನವೊಂದಕ್ಕೆ 100 ರಿಂದ 150 ಜನರಿಗೆ ಸಾದಿಕ್ ಉಚಿತ ಆಟೋ ಪ್ರಯಾಣ ಸೇವೆ ನೀಡುತ್ತಿದ್ದಾರೆ.. ಹೊಟ್ಟೆಪಾಡಿಗಾಗಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ಆಟೋ ಚಾಲಕನ ಈ ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯ.