ಉಡುಪಿ :  ರಂಗದಲ್ಲೇ ಕುಸಿದು‌ ಯಕ್ಷಗಾನ ಕಲಾವಿದರೋರ್ವರು ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. 

ಬೈಂದೂರಿನ ಜೋಗಿಬೆಟ್ಟು ಗ್ರಾಮದಲ್ಲಿ ಯಕ್ಷಗಾನ ನಡೆಯುತ್ತಿದ್ದ ವೇಳೆಯೇ ಕಲಾವಿದ ಹುಡಗೋಡು ಚಂದ್ರಹಾಸ (52) ಮೃತಪಟ್ಟಿದ್ದಾರೆ. 

ಜಲವಳ್ಳಿ ಮೇಳದ ಪ್ರದರ್ಶನ ದಲ್ಲಿ ಸಾಲ್ವನ ಪಾತ್ರ ಮಾಡುತ್ತಿದ್ದ ಅವರು ವೇದಿಕೆಯಲ್ಲಿಯೇ ಕುಸಿದು ಬಿದ್ದು  ಮೃತರಾಗಿದ್ದಾರೆ. 

ಸಂಭಾಷಣೆ ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಹೃದಯಾಘಾತ ಸಂಭವಿಸಿದ್ದು, ರಂಗಸ್ಥಳದಲ್ಲಿಯೇ ಉತ್ತರ ಕನ್ನಡದ ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಕಲಾವಿದ ಚಂದ್ರಹಾಸ ಕೊನೆಯುಸಿರೆಳೆದಿದ್ದಾರೆ.