Asianet Suvarna News Asianet Suvarna News

ಸೋಲಿಗೆ ಕಾರಣವೇನು ಎನ್ನುವುದು ಬಿಚ್ಚಿಟ್ಟ ಎಚ್ ಡಿಡಿ

ಲೋಕಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣ ಏನು ಎನ್ನುವುದನ್ನು ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ ಬಿಚ್ಚಿಟ್ಟಿದ್ದಾರೆ. 

Family Politics Is The Reason Behind Lok Sabha Defeat
Author
Bengaluru, First Published Jun 30, 2019, 7:30 AM IST

ಬೆಂಗಳೂರು [ಜೂ.30] :  ‘ನನ್ನ ರಾಜಕೀಯ ಜೀವನದಲ್ಲಿಯೇ ನಾನು ಕುಟುಂಬ  ರಾಜಕಾರಣ ಮಾಡಿಲ್ಲ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಲ್ಲಿಯೇ ಮೂವರು ನಿಲ್ಲಬೇಕಾದ ಪರಿಸ್ಥಿತಿ ಬಂತು. ಇದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ವಿರೋಧ ವ್ಯಕ್ತವಾಯಿತು. ಇದಕ್ಕೆ ಜನರು ತಕ್ಕ ಶಿಕ್ಷೆ ಕೊಟ್ಟಿದ್ದಾರೆ.’ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಕುಟುಂಬ ರಾಜಕಾರಣದ ಬಗ್ಗೆ ಆಡಿದ ಪಶ್ಚಾತ್ತಾಪದ ಮಾತುಗಳು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೊನೆ ಉಸಿರು ಇರುವವರೆಗೂ ಪ್ರಾದೇಶಿಕ ಪಕ್ಷಕ್ಕಾಗಿ ಹೋರಾಟ ನಡೆಸುತ್ತೇನೆ. ಮತ್ತೊಮ್ಮೆ ಬಿಜೆಪಿ ತಲೆ ಎತ್ತಬಾರದು. ನಾನು ಸತ್ತರೂ ನನ್ನ ಪಕ್ಷ ಉಳಿಯಬೇಕು. ಲೋಕಸಭೆ ಚುನಾವಣೆ ಯಲ್ಲಿ ಪಕ್ಷದ ಸೋಲಿಗೆ ನನ್ನಲ್ಲಿಯೇ ದೋಷ ಇರಬಹುದು.

ಒಂದು ರೀತಿಯಲ್ಲಿ ನಾನೇ ತಪ್ಪಿತಸ್ಥ ಇರಬಹುದು. ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ. ರಾಜಕೀಯ ಜೀವನದಲ್ಲಿ ಕುಟುಂಬ ರಾಜಕಾರಣ ಮಾಡಿರಲಿಲ್ಲ. ಆದರೆ, ಲೋಕಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಲ್ಲೇ ಮೂವರು ಸ್ಪರ್ಧಿಸಬೇಕಾದ ಪರಿಸ್ಥಿತಿ ಎದುರಾಯಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಜನತೆ ಶಿಕ್ಷೆ ಕೊಟ್ಟಿದ್ದಾರೆ ಎಂದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ನಿಖಿಲ್‌ಗೆ ಒಳ್ಳೆಯ ಹೆಸರು ಬರುತ್ತಿದೆ: ಇನ್ನು ಮುಂದೆ ಪಕ್ಷದ ಜವಾಬ್ದಾರಿಯು ಮುಂದಿನ ಪೀಳಿಗೆಗೆ ಸೇರಿದ್ದು. ಒಂದು ತಿಂಗಳಲ್ಲಿ ಪಕ್ಷದಲ್ಲಿನ ಎಲ್ಲಾ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ. ಮಂಡ್ಯದಲ್ಲಿ ಸೋಲನುಭವಿಸಿದ ನಿಖಿಲ್ ಕುಮಾರಸ್ವಾಮಿ ಒಬ್ಬ ಯುವಕನಾಗಿ ಶಕ್ತಿಮೀರಿ ಕೆಲಸ ಮಾಡಿದ್ದು, ಒಳ್ಳೆಯ ಹೆಸರು ಪಡೆಯುತ್ತಿದ್ದಾನೆ. ನಿಖಿಲ್ ನಟನಾಗಿ ಒಳ್ಳೆಯ ಹೆಸರು ಮಾಡಿದ್ದ. ಆದರೆ, ಆತ ರಾಜಕೀಯಕ್ಕೆ ಬರುತ್ತಾನೆಂದು ಕನಸಿ ನಲ್ಲಿಯೂ ಯೋಚಿಸಿರಲಿಲ್ಲ ಎಂದ ಅವರು, ಪಕ್ಷ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಕಾರ್ಯಕರ್ತರ ಮಾತುಗಳನ್ನು ಗಮನಿಸಿದ್ದೇನೆ. ದೆಹಲಿಗೆ ಹೋಗುವ ಅವಕಾಶ ಇಲ್ಲವಾಗಿದ್ದು, ಪಕ್ಷದ ಕಚೇರಿಯಲ್ಲಿ ಕುಳಿತು ಸಂಘಟನೆಗೊಳಿಸುತ್ತೇನೆ ಎಂದು ಹೇಳಿದರು.

ನಾವು 37 ಸ್ಥಾನವನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸ್ಥಾನ ಕೇಳಲು ಹೋಗುತ್ತೇವಾ? ಕಾಂಗ್ರೆಸ್‌ನ ಅಧಿನಾಯಕ ರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿ ದರು. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಒತ್ತಡ ಹಾಕಿದ್ದರು. ಕಾಂಗ್ರೆಸ್‌ನವರೇ ಕುಮಾರ ಸ್ವಾಮಿ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕರಿಗೆ ಮತ್ತೊಮ್ಮೆ ತಿರುಗೇಟು ನೀಡಿದರು.

ಸರ್ಕಾರಕ್ಕೆ ಅಪಾಯವಿಲ್ಲದ ರೀತಿ ಪಾದಯಾತ್ರೆ: ಪಕ್ಷದ ಬಲವರ್ಧನೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆದರೆ, ಮೈತ್ರಿ ಸರ್ಕಾರಕ್ಕೆ ಅಪಾಯ ಬಾರದ ರೀತಿಯಲ್ಲಿ ಪಾದಯಾತ್ರೆ ಕೈಗೊಳ್ಳಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಐದು ವರ್ಷ ಇರಬೇಕು ಎನ್ನುವುದಕ್ಕಿಂತ ಜಾತ್ಯತೀತ ಪಕ್ಷ ಶಾಶ್ವತವಾಗಿರಬೇಕು. ಅದಕ್ಕಾಗಿ ನೀವೆಲ್ಲರೂ ಶ್ರಮವಹಿಸ ಬೇಕು. ಪಾದಯಾತ್ರೆಗೆ ಹೆಚ್ಚು ತಡ ಮಾಡಬಾರದು.

ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬಹಳ ಉದಾಸೀನವಾಗಿ ಕಾಣುತ್ತಿದ್ದವು. ತಮಿಳುನಾಡಿನಲ್ಲಿ ಕರುಣಾನಿಧಿ ಅವರು ಗಾಲಿಕುರ್ಚಿಯಲ್ಲಿ ಕುಳಿತು ತಮ್ಮ ಪಕ್ಷವನ್ನು ಸಂಘಟಿಸಿ ಸರ್ಕಾರ ರಚನೆ ಮಾಡಿದರು. ಅಂತೆಯೇ ರಾಜ್ಯದಲ್ಲಿಯೂ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು. 

Follow Us:
Download App:
  • android
  • ios