ಆಶಿಶ್ ದಹಿಯಾ ಪ್ರಮಾದವಶಾತ್ ಈಜುಕೊಳಕ್ಕೆ ಬಿದ್ದು ಮುಳುಗುತ್ತಿದ್ದ ತನ್ನ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಈಜುಕೊಳಕ್ಕೆ ಧುಮುಕಿದ್ದರು ಎನ್ನಲಾಗಿದೆ.
ನವದೆಹಲಿ: ದಕ್ಷಿಣ ದೆಹಲಿಯ ವಸಂತ್ ವಿಹಾರದಲ್ಲಿ ಸ್ವಿಮ್ಮಿಂಗ್ ಪೂಲ್’ನಲ್ಲಿ ಮುಳುಗಿ ಮೃತಪಟ್ಟರೆನ್ನಲಾದ ಯುವ ಐಏಎಸ್ ಅಧಿಕಾರಿಯ ಸಾವಿನ ಬಗ್ಗೆ ತನಿಖೆಯಾಗಬೇಕೆಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.

ಮೃತಪಟ್ಟಿರುವ ಅಧಿಕಾರಿ ಜಮ್ಮು& ಕಾಶ್ಮೀರ ಕೇಡರ್ ಆಶಿಶ್ ದಹಿಯಾ (30) ಉತ್ತಮ ಈಜುಪಟುವಾಗಿದ್ದು, ಪ್ರಮಾದವಶಾತ್ ಈಜುಕೊಳಕ್ಕೆ ಬಿದ್ದು ಮುಳುಗುತ್ತಿದ್ದ ತನ್ನ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಈಜುಕೊಳಕ್ಕೆ ಧುಮುಕಿದ್ದರು ಎನ್ನಲಾಗಿದೆ.
ಆಶಿಶ್ ಈ ಹಿಂದೆ ಹಿಮಾಜಲ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ತನ್ನ ಗೆಳೆಯರೊಂದಿಗೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಘಟನೆ ರಾತ್ರಿ 1.30 ಹೊತ್ತಿಗೆ ನಡೆದಿದೆ ಎನ್ನಲಾಗಿದೆ.
