ಸಿದ್ದರಾಮಯ್ಯಗೆ ತಮಿಳುನಾಡು ರಾಜ್ಯಪಾಲ ಸ್ಥಾನ..? (ಸುಳ್ಳು ಸುದ್ದಿ)

Faking NewsTamil Nadu Leaders asks Karnataka To Send Siddaramaiah As Tamilnadu Governer
Highlights

ಕಾಂಗ್ರೆಸ್ ಮುಖಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೀಗ ಹೊಸ ಆಫರ್ ಒಂದು ಒದಗಿ ಬಂದಿದೆ. ಬಾದಾಮಿ ಕ್ಷೇತ್ರದ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಒಂದು ಫೋನ್ ಕರೆ ಮೂಲಕವೇ ಫಟಾಫಟ್ 1 ಟಿಎಂಸಿ  ನೀರು ಬಿಡುಗಡೆ ಮಾಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿ ಕಂಡು ತಮಿಳುನಾಡು ಹೊಸ ಐಡಿಯಾ ಮಾಡಿದೆ. 

ಬೆಂಗಳೂರು :  ಬಾದಾಮಿ ಕ್ಷೇತ್ರದ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಒಂದು ಫೋನ್ ಕರೆ ಮೂಲಕವೇ ಫಟಾಫಟ್ 1 ಟಿಎಂಸಿ  ನೀರು ಬಿಡುಗಡೆ ಮಾಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿ ಕಂಡು ತಮಿಳುನಾಡು ಹೊಸ ಐಡಿಯಾ ಮಾಡಿದೆ. 

ತಮಿಳುನಾಡಿನ ರಾಜ್ಯಪಾಲರನ್ನಾಗಿ ಸಿದ್ದರಾಮಯ್ಯ ಅವರನ್ನು ನಿಯೋಜಿಸುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಲು ಉದ್ದೇಶಿಸಿದೆ.

ತಮಿಳುನಾಡಿಗೆ ಬೇಕೆಂದಾಗಲೆಲ್ಲಾ ಕರ್ನಾಟಕ ನೀರು ಬಿಡುಗಡೆ ಮಾಡುವುದಿಲ್ಲ. ಸಾಕಷ್ಟು ಮಳೆಯಾಗಿ, ಡ್ಯಾಂ ಭರ್ತಿಯಾದಾಗ ಬೇಡವೆಂದರೂ ನೀರು ಹರಿಸುತ್ತದೆ. 

ಹೀಗಾಗಿ ಸಿದ್ದರಾಮಯ್ಯ ರಾಜ್ಯಪಾಲರಾಗಿ ಬಂದರೆ ಅವರ ನೆರವಿನಿಂದ ಒಂದು ಫೋನ್ ಕರೆ ಮೂಲ ಕವೇ ಕಾವೇರಿ ನೀರು ಬಿಡುಗಡೆ ಮಾಡಿಸಿಕೊಳ್ಳಬಹುದು ಎಂದು ಮೂಲಗಳು ಸುಳ್ ಸುದ್ದಿಸಂಸ್ಥೆಗೆ ತಿಳಿಸಿವೆ. 

[ಸುಳ್ಳು ಸುದ್ದಿ]

loader