ಸುಳ್ ಸುದ್ದಿ!

ಪರಸ್ಪರ ಪೈಪೋಟಿ ನಡೆಸಿ ಹೈರಾಣಾಗಿರುವ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಇನ್ನಾವ ರೀತಿಯ ಆಕರ್ಷಕ ಪ್ಲಾನ್‌ ಬಿಡುಗಡೆ ಮಾಡಬಹುದು ಎಂಬ ಚಿಂತೆಗೆ ಬಿದ್ದಿವೆ.

ಏರ್‌ಟೆಲ್‌ ಕಂಪನಿ ಒಂದು ಆಫರ್‌ ಬಿಡುಗಡೆ ಮಾಡಿದರೆ ಅದರ ಅಪ್ಪನಂತಹ ಆಫರನ್ನು ವೊಡಾ ಫೋನ್‌ ಬಿಡುಗಡೆ ಮಾಡುತ್ತದೆ. ಅದರ ಬೆನ್ನಿಗೇ ಬಿಎಸ್‌ಎನ್‌ಎಲ್‌ ಇನ್ನೊಂದು ಕಿಲ್ಲರ್‌ ಪ್ಲಾನ್‌ ಘೋಷಿಸುತ್ತದೆ. ಅಷ್ಟರಲ್ಲಿ ಜಿಯೋ ಕಂಪನಿ ಇವೆಲ್ಲವುಗಳನ್ನೂ ಮೀರಿಸುವ ಪ್ಲಾನ್‌ ಬಿಡುಗಡೆ ಮಾಡುತ್ತದೆ.

ಇದು ಹೀಗೇ ಮುಂದುವರಿದರೆ ಹೊಸ ಪ್ಲಾನ್‌ ಹುಡುಕುವುದು ಕಷ್ಟಎಂದು ಯೋಚಿಸಿರುವ ಟೆಲಿಕಾಂ ಕಂಪನಿಯೊಂದು ಶೀಘ್ರದಲ್ಲೇ ಎಲ್ಲಾ ಪ್ಲಾನ್‌ಗಳನ್ನೂ ಮೀರಿಸುವ ‘ಪ್ಲಾನ್‌ಗಳ ಬಾಪ್‌' ಎಂಬ ಆಫರ್‌ ಘೋಷಿಸಲಿದೆ. ಅದರಡಿ ಆ ಟೆಲಿಕಾಂ ಕಂಪನಿಯು ಉಚಿತ ಇಂಟರ್ನೆಟ್‌, ಉಚಿತ ಅನ್‌ಲಿಮಿಟೆಡ್‌ ಕಾಲ್‌ ನೀಡುವುದರ ಜೊತೆಗೆ ಗ್ರಾಹಕರಿಗೆ ಇಂತಿಷ್ಟುಎಂದು ಪ್ರತಿ ತಿಂಗಳು ತಾನೇ ಹಣ ನೀಡಲಿದೆ ಎಂದು ಸುಳ್‌ಸುದ್ದಿಗೆ ಮೂಲಗಳು ಹೇಳಿವೆ.