ಚೆನ್ನೈ : ಇಷ್ಟು ದಿನ ಕಾವೇರಿ ನೀರು ಬಿಡುವಂತೆ ಕ್ಯಾತೆ ತೆಗೆದು ಕರ್ನಾಟಕವನ್ನು ಪೀಡಿಸುತ್ತಿದ್ದ ತಮಿಳುನಾಡು ಇದೀಗ ಕೆ.ಆರ್.ಎಸ್. ಜಲಾಶಯದಿಂದ ನೀರು ಬಿಡುವುದನ್ನು ನಿಲ್ಲಿಸಲು ಆದೇಶ ನೀಡುವಂತೆ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕೆ.ಆರ್.ಎಸ್. ಜಲಾಶಯ ಭರ್ತಿಯಾಗಿ ರುವುದರಿಂದ ಎಲ್ಲಾ ನೀರನ್ನೂ ತಮಿಳುನಾಡಿಗೆ ಬಿಡಲಾಗುತ್ತಿದೆ. 

ಇದರಿಂದ ಮೆಟ್ಟೂರು ಡ್ಯಾಂ ಕೂಡ ತುಂಬಿದೆ. ಡ್ಯಾಮ್ ಪಕ್ಕದಲ್ಲೇ ಸಾವಿರಾರು ಎಕರೆ ಭತ್ತದ ಗದ್ದೆಗಳು ಇರುವುದರಿಂದ ಅವೆಲ್ಲವೂ ಈಗ ಮುಳುಗಡೆ ಯಾಗಲಿದೆ. 

ಹೀಗಾಗಿ ಬೆಳೆಗಳನ್ನು ಉಳಿಸಿಕೆ ಕೊಳ್ಳಲು ಮುಂದಾಗಿರುವ ತಮಿಳುನಾಡು ನೀರು ಬಿಡುವುದನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಇದು ಸುಪ್ರೀಂಕೋರ್ಟ್ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

[ಸುಳ್ಳು ಸುದ್ದಿ]