[ಸುಳ್ಳು ಸುದ್ದಿ] ದೇಶದ ಎಲ್ಲಾ ಮೂರ್ತಿಗಳು 100 ಅಡಿ ಎತ್ತರಿಸಲು ಸರ್ಕಾರ ನಿರ್ಧಾರ

First Published 8, Mar 2018, 10:40 AM IST
Faking News Govt Plan To Control Statues Vandalized
Highlights

ಲೆನಿನ್ ಪ್ರತಿಮೆ ಧ್ವಂಸದ ಬಳಿಕ ದೇಶದೆಲ್ಲೆಡೆ ಈ ರೀತಿಯ ಘಟನೆಗಳು ಹೆಚ್ಚುತ್ತಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಜನರು ಪ್ರತಿಮೆಗಳ ಹತ್ತಿರಕ್ಕೂ ಸುಳಿಯದಂತೆ ಮಾಡಲು ದೇಶದಲ್ಲಿರುವ ಎಲ್ಲಾ ಪ್ರತಿಮೆಗಳ ತಳಪಾಯವನ್ನು 100 ಅಡಿ ಎತ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ಬೆಂಗಳೂರು :  ಲೆನಿನ್ ಪ್ರತಿಮೆ ಧ್ವಂಸದ ಬಳಿಕ ದೇಶದೆಲ್ಲೆಡೆ ಈ ರೀತಿಯ ಘಟನೆಗಳು ಹೆಚ್ಚುತ್ತಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಜನರು ಪ್ರತಿಮೆಗಳ ಹತ್ತಿರಕ್ಕೂ ಸುಳಿಯದಂತೆ ಮಾಡಲು ದೇಶದಲ್ಲಿರುವ ಎಲ್ಲಾ ಪ್ರತಿಮೆಗಳ ತಳಪಾಯವನ್ನು 100 ಅಡಿ ಎತ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ಹೀಗಾಗಿ 100 ಅಡಿ ಎತ್ತರ ಮತ್ತು 10 ಅಗಲದ ಕಾಂಕ್ರೀಟ್ ಪಿಲ್ಲರ್ ಎಬ್ಬಿಸಿ ಅದರ ಮೇಲೆ ಪ್ರತಿಮೆ ಇರಿಸಲಾಗುತ್ತದೆ. ಅಲ್ಲದೇ ಪ್ರತಿಮೆಯ ಸುತ್ತಲೂ 25 ಅಡಿ ಆಳದ ಕಂದಕ ಕೊರೆಯಲಾಗುತ್ತದೆ. ಇದರಿಂದ ಜೆಸಿಬಿ, ಏಣಿ ಹೀಗೆ ಯಾವುದನ್ನೇ ತಂದರೂ ಪ್ರತಿಮೆಯ ಹತ್ತಿರಕ್ಕೂ ಬರಲು ಸಾಧ್ಯವಾಗುವುದಿಲ್ಲ.

ಇದಕ್ಕಾಗಿ ೧೦೦ ಕೋಟಿ ರು. ಅನುದಾನವನ್ನು ಸದ್ಯ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಸುಳ್ ಸುದ್ದಿಗೆ ಮಾಹಿತಿ ನೀಡಿವೆ. [ಸುಳ್ಳು ಸುದ್ದಿ] 

loader